ಹಳೆಯಂಗಡಿ: ಮಸೀದಿಗಳಿಗೆ ಕಲ್ಲೆಸೆತ ಪ್ರಕರಣ; ಪದಾಕಾರಿಗಳ ಸಭೆ

Update: 2017-01-23 18:41 GMT

ಮುಲ್ಕಿ, ಜ.23: ಇಲ್ಲಿನ ಹಳೆಯಂಗಡಿ ಸಂತೆಕಟ್ಟೆ ಜುಮಾ ಮಸೀದಿ ಮತ್ತು ಕೆ.ಎಸ್. ರಾವ್ ನಗರದ ಅಲ್ ಖುಬಾ ಜುಮಾ ಮಸೀದಿಗಳಿಗೆ ಕಲ್ಲೆಸೆದ ಪ್ರಕರಣದ ಸಂಬಂಧ ಸೋಮವಾರ ಮುಲ್ಕಿ ಠಾಣೆಯ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದಲ್ಲಿ ಅವರ ಕಚೇರಿಯಲ್ಲಿ ಎರಡೂ ಮಸೀದಿಯ ಆಡಳಿತ ಸಮಿತಿಗಳೊಂದಿಗೆ ಸಮಾಲೋಚನಾ ಸಭೆ ನಡೆಯಿತು.

 ಸಭೆಯಲ್ಲಿ ಈ ಸಂಬಂಧ ಮಾಹಿತಿ ನೀಡಿದ ಅವರು, ಪ್ರಕರ ಣದ ಬಗ್ಗೆ ಈಗಾಗಲೇ ಅನುಮಾನದ ಮೇರೆಗೆ 7ಮಂದಿಯನ್ನು ಮಂಗಳೂರಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ವಿಚಾರಣೆಯ ವೇಳೆ ಕೃತ್ಯ ನಡೆಸಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ನಿರಪರಾಗಳಿಗೆ ಶಿಕ್ಷೆ ಆಗಬಾರದು ಎಂದು ವಶಕ್ಕೆ ಪಡೆದವರನ್ನು ಬಿಡಲಾಗಿದೆ ಎಂದು ಹೇಳಿದರು. ಶೀಘ್ರವಾಗಿ ಅಪರಾಗಳನ್ನು ಬಂಸುವುದಾಗಿ ಅವರು ಭರವಸೆ ನೀಡಿದರು. ಸಂತೆಕಟ್ಟೆ ಮಸೀದಿಗೆ ಕಳೆದ ಮೂರು ವರ್ಷಗಳ ಹಿಂದೆಯೂ ಇದೇ ರೀತಿ ಕಲ್ಲೆಸೆಯಲಾಗಿತ್ತು. ಆದರೆ ಇದುವರೆಗೆ ಅಪರಾಗಳ ಬಂಧನವಾಗಿಲ್ಲ ಎಂದು ಸಭೆಯಲ್ಲಿದ್ದ ಕೆಲ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದ್ದು, ಈ ಪ್ರಕರಣವೂ ಅದೇ ಹಾದಿ ಹಿಡಿಯುವುದೋ ಎಂದು ಸಂಶಯ ವ್ಯಕ್ತ ಪಡಿಸಿದರು.

ಈ ಬಗ್ಗೆ ಪ್ರಯಿಕ್ರಿಯಿಸಿದ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಇಂತಿಷ್ಟೇ ಸಮಯದಲ್ಲಿ ಬಂಧನ ಮಾಡಲಾಗುವುದು ಎಂಬುದು ಅಸಾಧ್ಯ. ಆದರೆ, ಹಿಂದಿನ ಪ್ರಕರಣದಂತೆ ನನೆಗುದಿಗೆ ಬೀಳದಂತೆ ಎಚ್ಚರಿಕೆ ವಹಿಸಿ ಪ್ರಕರಣ ಭೇದಿಸಲಾಗುವುದು ಎಂದರು.

ಯಾವುದೇ ಕಾರಣಕ್ಕೂ ಅಪರಾಗಳನ್ನು ಬಂಸದೇ ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.

ದುಷ್ಕರ್ಮಿಗಳ ಬಂಧನಕ್ಕೆ ಸಂಘ ಪರಿವಾರದ ಅಡ್ಡಿ?

 ಮಸೀದಿಗಳ ಪ್ರಕರಣಕ್ಕೆ ಸಂಬಂಸಿದಂತೆ 7ಮಂದಿ ಯನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ವಿಚಾರಣೆ ನಡೆಸಿ ಬಿಡುಗಡೆ ಗೊಳಿದ್ದರು. ಅವರನ್ನು ಹೆಚ್ಚಿನ ವಿಚಾರಣೆ ನಡೆಸಿದ್ದರೆ ಪ್ರಕರಣ ಹೊರಬೀಳುವ ಸಾಧ್ಯತೆಗಳು ಇವೆ ಎಂದು ಸ್ಥಳಿಯರು ತಿಳಿಸಿದ್ದಾರೆ.ಆದರೆ ಸ್ಥಳೀಯ ಸಂಘ ಪರಿವಾರದ ಮುಖಂಡರು ಶಂಕಿತರ ಹೆಚ್ಚಿನ ವಿಚಾರಣೆಗೆ ಅಡ್ಡಿ ಪಡಿಸಿ ಅಪರಾಗಳ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಮಾತುಗಳೂ ಸ್ಥಳೀಯವಾಗಿ ಕೇಳಿ ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News