×
Ad

5 ಸಿಖ್ಖರಿಗೆ ಪೇಟ ಧರಿಸಿ ಅಮೆರಿಕ ಸೇನೆಗೆ ಸೇರಲು ಅವಕಾಶ

Update: 2017-01-24 20:28 IST

ವಾಶಿಂಗ್ಟನ್, ಜ. 24: ತಮ್ಮ ಧಾರ್ಮಿಕ ಗುರುತುಗಳನ್ನು ಉಳಿಸಿಕೊಂಡೇ ಸೇನೆಯಲ್ಲಿ ಸೇವೆ ಸಲ್ಲಿಸಲು ಐವರು ಸಿಖ್ಖರಿಗೆ ಅಮೆರಿಕ ಸರಕಾರ ಅವಕಾಶ ನೀಡಿದೆ.

ಪೇಟ, ಹಿಜಾಬ್ ಅಥವಾ ಗಡ್ಡ ಧರಿಸುವ ವ್ಯಕ್ತಿಗಳನ್ನು ಸೇನೆಗೆ ನಿಯೋಜಿಸಬಹುದು ಎಂಬುದಾಗಿ ಅಮೆರಿಕ ಸೇನೆಯು ನೂತನ ಅಧಿಸೂಚನೆಯೊಂದನ್ನು ಹೊರಡಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ.

ಧರ್ಮಕ್ಕೆ ಸಂಬಂಧಿಸಿದ ಗೋಚರಿಸುವ ಚಿಹ್ನೆಗಳನ್ನು ರಕ್ಷಣಾ ಇಲಾಖೆಯು 1981ರಲ್ಲಿ ನಿಷೇಧಿಸಿದ ಬಳಿಕ, ಮೊದಲ ಬಾರಿಗೆ ಸಿಖ್ಖರನ್ನು ಈ ಸಂಖ್ಯೆಯಲ್ಲಿ ಸೇನೆಗೆ ಸೇರಿಸಿಕೊಳ್ಳಲಾಗಿದೆ.

ನೂತನ ನಿಯಮಗಳನ್ನು ಜನವರಿ 4ರಂದು ಹೊರಡಿಸಲಾಗಿತ್ತು. ಅದರ ಪ್ರಕಾರ, ಧಾರ್ಮಿಕ ಚಿಹ್ನೆಗಳನ್ನು ಧರಿಸುವುದಕ್ಕೆ ಅಂಗೀಕಾರವನ್ನು ಬ್ರಿಗೇಡ್ ಮಟ್ಟದಲ್ಲಿ ನೀಡಬಹುದಾಗಿದೆ. ಮೊದಲು ಈ ಅನುಮೋದನೆಯನ್ನು ಕಾರ್ಯದರ್ಶಿ ಮಟ್ಟದಲ್ಲಿ ಪಡೆಯಬೇಕಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News