ರೊಹಿಂಗ್ಯ ಮುಸ್ಲಿಮರ ಹೊಟ್ಟೆಪಾಡಿಗೆ ಕಲ್ಲು ಹಾಕಿದ ಮ್ಯಾನ್ಮಾರ್ ಸರ್ಕಾರ!
Update: 2017-01-24 21:21 IST
ತಾ ಪ್ಯಾಯ್ ತಾವ್ (ಮ್ಯಾನ್ಮಾರ್), ಜ. 24: ನಿರಾಶ್ರಿತ ರೊಹಿಂಗ್ಯ ಮುಸ್ಲಿಮರು ಮೀನುಗಾರಿಕೆಗೆ ದೋಣಿಗಳನ್ನು ಬಳಸುವುದನ್ನು ಮ್ಯಾನ್ಮಾರ್ ಸರಕಾರದ ಅಧಿಕಾರಿಗಳು ನಿಷೇಧಿಸಿದ್ದಾರೆ. ಹಾಗಾಗಿ, ಈಗ ರೊಹಿಂಗ್ಯ ನಿರಾಶ್ರಿತರು ಮೀನು ಹಿಡಿಯಲು ಪ್ಲಾಸ್ಟಿಕ್, ಬಿದಿರು ಮತ್ತು ಬಿಳಲುಗಳಿಂದ ಮಾಡಿದ ತೆಪ್ಪಗಳನ್ನು ಬಳಸಬೇಕಾಗಿದೆ.
ಈಗ ರೊಹಿಂಗ್ಯ ಮೀನುಗಾರರು ಈ ದುರ್ಬಲ ತೆಪ್ಪಗಳನ್ನು ಆಶ್ರಯಿಸಿ ಬಂಗಾಳ ಕೊಲ್ಲಿಗೆ ಕೊರೆಯುವ ಚಳಿಯಲ್ಲಿ ಮೀನು ಹಿಡಿಯಲು ಇಳಿಯಬೇಕಾಗಿದೆ.
ಬಂಡುಕೋರರು ದೋಣಿಗಳನ್ನು ಬಳಸಿ ಸಮುದ್ರದ ಮೂಲಕ ಬರುವುದನ್ನು ಅಥವಾ ತಪ್ಪಿಸಿಕೊಂಡು ಹೋಗುವುದನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಈ ನಿಯಮವು ರಖೈನ್ ರಾಜ್ಯದ ರೊಹಿಂಗ್ಯ ಮುಸ್ಲಿಮರು ವಾಸಿಸುವ ಸಣ್ಣ ಪ್ರದೇಶದಲ್ಲಿ ಮಾತ್ರ ಚಾಲ್ತಿಯಲ್ಲಿದೆ.