×
Ad

ಫೆ.2ರಂದು ಕೋರ್ಟ್ ಆದೇಶ ಪ್ರಕಟ

Update: 2017-01-24 23:57 IST

ಹೊಸದಿಲ್ಲಿ, ಜ.24: ಏರ್‌ಸೆಲ್- ಮ್ಯಾಕ್ಸಿಸ್ ಒಪ್ಪಂದ ಹಗರಣಕ್ಕೆ ಸಂಬಂಧಿಸಿ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಹಾಗೂ ಅವರ ಸಹೋದರ ಕಲಾನಿಧಿ ಮಾರನ್ ವಿರುದ್ಧ ಆರೋಪಗಳನ್ನು ಹೊರಿಸುವ ಕುರಿತ ತನ್ನ ಆದೇಶವನ್ನು ವಿಶೇಷ ನ್ಯಾಯಾಲಯವು ಫೆಬ್ರವರಿ 2ರಂದು ಘೋಷಿಸಲಿದೆ. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವು ತಮ್ಮ ವಿರುದ್ಧ ಹೊರಿಸಿರುವ ಈ ಆರೋಪಗಳನ್ನು ಇವರಿಬ್ಬರು ನಿರಾಕರಿಸಿದ್ದಾರೆ ಹಾಗೂ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ.

ಏರ್‌ಸೆಲ್- ಮ್ಯಾಕ್ಸಿಸ್ ಒಪ್ಪಂದ ಹಗರಣಕ್ಕೆ ಸಂಬಂಧಿಸಿ ಮಾರನ್ ಸಹೋದರರು ಮತ್ತಿತರರ ವಿರುದ್ಧ ಆರೋಪ ಹೊರಿಸುವ ಕುರಿತು ವಿಶೇಷ ನ್ಯಾಯಾಧೀಶ ಓ.ಪಿ. ಸೈನಿ, ಇಂದು ತಮ್ಮ ಆದೇಶವನ್ನು ಪ್ರಕಟಿಸಲಿದ್ದರು. ಆದರೆ ಆದೇಶ ಸಿದ್ಧವಾಗಿರದಿರುವುದರಿಂದ ಅದನ್ನು ಫೆಬ್ರವರಿ 2ಕ್ಕೆ ಮುಂದೂಡಿದರು. ಯುಪಿಎ ಸರಕಾರದಲ್ಲಿ ದಯಾನಿಧಿ ಮಾರನ್ ದೂರಸಂಪರ್ಕ ಸಚಿವರಾಗಿದ್ದಾಗ, ಟೆಲಿಕಾಂ ಸಂಸ್ಥೆ ಏರ್‌ಸೆಲ್ ಹಾಗೂ ಎರಡು ಉಪಕಂಪೆನಿಗಳ ಶೇರುಗಳನ್ನು ಮಲೇಶ್ಯ ಮೂಲದ ಮ್ಯಾಕ್ಸಿಸ್‌ಸಮೂಹಕ್ಕೆ ಮಾರಾಟ ಮಾಡುವಂತೆ, ಚೆನ್ನೈ ಮೂಲದ ಟೆಲಿಕಾಂ ಉದ್ಯಮಿ ಸಿ. ಶಿವಶಂಕರನ್ ಮೇಲೆ ಒತ್ತಡ ಹೇರಿದ್ದರೆಂದು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವು ದೋಷಾರೋಪಪಟ್ಟಿಯಲ್ಲಿ ಆರೋಪಿಸಿತ್ತು.
ಏರ್‌ಸೆಲ್-ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿ ಸಿಬಿಐಯು ಮಾರನ್ ಸಹೋದರರು, ಮೆ.ಸನ್ ಡೈರೆಕ್ಟ್ ಟಿವಿ (ಪ್ರೈ.) ಲಿ., ಮಲೇಶ್ಯದ ಮ್ಯಾಕ್ಸಿಸ್ ಕಮ್ಯುನಿಕೇಶನ್ಸ್, ಆಗಿನ ಟೆಲಿಕಾಂ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಜೆ.ಎಸ್.ಶರ್ಮಾ ಮತ್ತಿತರರ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News