ಸುಪ್ರೀಂನಲ್ಲಿ ಜ.30ರಂದು ಜಲ್ಲಿಕಟ್ಟು ಕಾಯ್ದೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ
Update: 2017-01-25 12:28 IST
ಹೊಸದಿಲ್ಲಿ, ಜ.25:ಜಲ್ಲಿ ಕಟ್ಟು ಆಚರಣೆಗೆ ತಮಿಳುನಾಡು ಸರಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ಪ್ರಶ್ನಿಸಿ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಇತರ ಸಂಘಟನೆಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ಜ.30ರಂದು ನಡೆಯಲಿದೆ.
ಜಲ್ಲಿಕಟ್ಟು ಸಂಬಂಧಿಸಿ ಎಲ್ಲ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.
ಜಲ್ಲಿ ಕಟ್ಟು ಆಚರಣೆಗೆ ತಮಿಳುನಾಡು ಸರಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ಪ್ರಶ್ನಿಸಿ ಪ್ರಾಣಿ ದಯಾ ಸಂಘಟನೆಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.