×
Ad

ಪಾಕ್: ಭಾರತೀಯ ಸಿನೇಮಾಗಳ ಮೇಲಿನ ನಿಷೇಧ ತೆರವು

Update: 2017-01-25 20:41 IST

ಇಸ್ಲಾಮಾಬಾದ್, ಜ. 25: ಭಾರತೀಯ ಸಿನೇಮಾಗಳ ಪ್ರದರ್ಶನದ ಮೇಲೆ ನಾಲ್ಕು ತಿಂಗಳ ಹಿಂದೆ ವಿಧಿಸಿದ್ದ ನಿಷೇಧವನ್ನು ಪಾಕಿಸ್ತಾನ ತೆರವುಗೊಳಿಸಿದೆ. ಹಾಗಾಗಿ, ಹಿಂದಿ ಸಿನೇಮಾಗಳಾದ ‘ರಯೀಸ್’ ಮತ್ತು ‘ಕಾಬಿಲ್’ ಆ ದೇಶದಲ್ಲಿ ತೆರೆ ಕಾಣಲು ಕ್ಷಣಗಣನೆ ನಡೆಸುತ್ತಿವೆ.

ಉರಿ ದಾಳಿ ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಾಚೆಯ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ‘ಸರ್ಜಿಕಲ್’ ದಾಳಿಗಳ ಬಳಿಕ ಉಭಯ ದೇಶಗಳ ಸಂಬಂಧ ತೀರಾ ಹಳಸಿತ್ತು. ಅದೇ ವೇಳೆ, ಹಿಂದಿ ಸಿನೇಮಾಗಳಲ್ಲಿ ಪಾಕಿಸ್ತಾನಿ ಕಲಾವಿದರಿಗೆ ಅವಕಾಶ ನೀಡದಿರಲು ಬಾಲಿವುಡ್ ನಿರ್ಧರಿಸಿತ್ತು.

ಈ ಹಿನ್ನೆಲೆಯಲ್ಲಿ, ಪಾಕಿಸ್ತಾನದಲ್ಲಿ ಭಾರತೀಯ ಚಿತ್ರಗಳ ಪ್ರದರ್ಶನದ ಮೇಲೆ ಅಲ್ಲಿನ ಸರಕಾರ ನಿಷೇಧ ವಿಧಿಸಿತ್ತು.ಪಾಕಿಸ್ತಾನದ ಸಿನೇಮಾ ಮಂದಿರಗಳು ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News