×
Ad

ಆಸ್ಕರ್‌ಗೆ ನಾಮಕರಣಗೊಂಡ ಮೂರನೇ ಭಾರತೀಯ ಮೂಲದ ನಟ ದೇವ್ ಪಟೇಲ್

Update: 2017-01-25 22:02 IST

ಹೊಸದಿಲ್ಲಿ,ಜ.25: ‘ಸ್ಲಮ್‌ಡಾಗ್ ಬಿಲಿಯನೇರ್’ ಖ್ಯಾತಿಯ ದೇವ್ ಪಟೇಲ್ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿದ್ದಾರೆ. ತನ್ಮೂಲಕ ನಟನೆ ವಿಭಾಗದಲ್ಲಿ ನಾಮಕರಣ ಪಡೆದ ಕೇವಲ ಮೂರನೇಯ ಭಾರತೀಯ ಮೂಲದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

‘ಲಯನ್’ ಚಿತ್ರದಲ್ಲಿಯ ತನ್ನ ಪೋಷಕ ಪಾತ್ರಕ್ಕಾಗಿ ದೇವ್ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿದ್ದಾರೆ ಎಂದು ಅಕಾಡಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಪ್ರಕಟಿಸಿದೆ.

ಹತ್ತು ವರ್ಷಗಳಿಗೂ ಹಿಂದೆ ಭಾರತೀಯ ಮೂಲದ ನಟರೋರ್ವರು ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿದ್ದೇ ಕೊನೆಯಾಗಿತ್ತು.. ಅವರು ಗಾಂಧಿ ಚಿತ್ರದಿಂದ ಭಾರತದಲ್ಲಿ ಜನಪ್ರಿಯರಾಗಿದ್ದ ಭಾರತ ಮೂಲದ ಬ್ರಿಟಿಷ್ ನಟ ಬೆನ್ ಕಿಂಗ್ಸ್ಲೆ. ಅವರು ಆಗ ತನ್ನ ‘ಹೌಸ್ ಆಫ್ ಸ್ಯಾಂಡ್ ಆ್ಯಂಡ್ ಫಾಗ್ ’ಚಿತ್ರಕ್ಕಾಗಿ ನಾಮಕರಣಗೊಂಡಿದ್ದರು. ಒಟ್ಟು ನಾಲ್ಕು ಬಾರಿ ಆಸ್ಕರ್‌ಗೆ ನಾಮಕರಣಗೊಂಡಿದ್ದ ಅವರು ಒಂದು ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

ಭಾರತೀಯ ಮೂಲದ ಇನ್ನೋರ್ವ ತಾರೆ ಮಿರ್ಲೆ ಒಬರಾನ್ ಅವರು 1935ರ ತನ್ನ ಚಿತ್ರ ‘ದಿ ಡಾರ್ಕ್ ಏಂಜಲ್’ಗಾಗಿ ನಾಮಕರಣ ಪಡೆದಿದ್ದರು. ಆದರೆ ತನ್ನ ಜೀವನದ ಹೆಚ್ಚಿನ ಭಾಗ ಅವರು ತನ್ನ ಮೂಲವನ್ನು ಗುಟ್ಟಾಗಿಯೇ ಇಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News