×
Ad

ಉ.ಪ್ರ. ಚುನಾವಣೆ: ನಾಮಪತ್ರ ಸಲ್ಲಿಸಿದ 95ರ ವೃದ್ಧೆ

Update: 2017-01-25 23:47 IST

ಆಗ್ರಾ, ಜ.25: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು 95ರ ಹರೆಯದ ಜಲ್‌ದೇವಿ ಎಂಬ ಮಹಿಳೆ ನಾಮಪತ್ರ ಸಲ್ಲಿಸಿದ್ದು, ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅತ್ಯಂತ ಹಿರಿಯ ಮಹಿಳೆ ಎನಿಸಿಕೊಂಡಿದ್ದಾರೆ.

ವಿಶೇಷವೆಂದರೆ ಇವರು ನಾಮಪತ್ರ ಸಲ್ಲಿಸಲು ಗಾಲಿಕುರ್ಚಿಯಲ್ಲಿ ಕುಳಿತು ಚುನಾವಣಾ ಆಯೋಗದ ಕಚೇರಿಗೆ ಆಗಮಿಸಿದ್ದರು. ಭ್ರಷ್ಟಾಚಾರವನ್ನು ಬುಡಮಟ್ಟದಿಂದ ಕಿತ್ತೆಸೆಯುವ ಉದ್ದೇಶದಿಂದ ಚುನಾವಣಾ ಕಣಕ್ಕೆ ಇಳಿದಿರುವುದಾಗಿ ಜಲ್‌ದೇವಿ ತಿಳಿಸಿದ್ದಾರೆ. ಪ್ರಸ್ತುತ ಈಕೆ ಜಗ್‌ನೇರ್ ಬ್ಲಾಕ್‌ನ ಪಂಚಾಯತ್ ಸದಸ್ಯೆಯಾಗಿದ್ದು ದಾಖಲೆ ಮತಗಳ ಅಂತರದಿಂದ ಗೆದ್ದು ಬಂದಿದ್ದರು. ಇವರು ಆಗ್ರಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು ಇಲ್ಲಿ ಫೆ.11ರಂದು ಚುನಾವಣೆ ನಡೆಯಲಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News