ಭಕ್ತಿಮಾರ್ಗದಿಂದ ಭ್ರಷ್ಟಾಚಾರಮುಕ್ತ ಸಮಾಜ: ಪೇಜಾವರ ಶ್ರೀ

Update: 2017-01-25 18:46 GMT

ಉಡುಪಿ,ಜ.25: ಯಾವುದೇ ವ್ಯವ ಹಾರದಲ್ಲಿ ಭಗವಂತನ ಪೂಜೆಯ ಭಾವನೆ ಇದ್ದರೆ ಅಲ್ಲಿ ಭ್ರಷ್ಟಾಚಾರ, ವಂಚನೆ, ಮೋಸ ಇರುವುದಿಲ್ಲ. ಭಕ್ತಿಯ ಮಾರ್ಗದಿಂದ ಭ್ರಷ್ಟಚಾರ ಮುಕ್ತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಶ್ರೀಮಧ್ವಾಚಾರ್ಯರ ಅವತಾರ ಸಮಾಪ್ತಿಯ ಸಪ್ತ ಶತ ಮಾನೋತ್ಸವ ಪ್ರಯುಕ್ತ ಬುಧವಾರ ರಾಜಾಂಗಣದಲ್ಲಿ ಆಯೋಜಿಸಲಾದ ಕರಾವಳಿ ಜಿಲ್ಲೆಗಳ ಸಂತ ಸಭಾವನ್ನು ಉದ್ಘಾಟಿಸಿ ಅವರು ಮಾತನಾಡು ತ್ತಿದ್ದರು. ಕೇಮಾರು ಮಠದ ಶ್ರೀ ಈಶವಿಠಲ ಸ್ವಾಮೀಜಿ ಮಾತನಾಡಿ, ನಾವೆಲ್ಲ ಹಿಂದೂ ಎಂದು ಹೇಳಿಕೊಳ್ಳುವ ಮೊದಲು ರಾಮಾಯಣ, ಮಹಾ ಭಾರತ, ಭಗವದ್ಗೀತೆಗಳನ್ನು ಅರಿತು ಕೊಳ್ಳಬೇಕಾಗಿದೆ. ಹಿಂದೂಗಳಿಗೆ ಧಾರ್ಮಿಕ ಶಿಕ್ಷಣ ನೀಡುವ ಕೆಲಸ ಅಗತ್ಯವಾಗಿಮಾಡಬೇಕು ಎಂದರು.

ಮೂಡುಬಿದಿರೆಯ ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ, ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಪೇಜಾವರ ಕಿರಿಯ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಹೊಸ್ಮಾರು ಶ್ರೀ ವಿಖ್ಯಾತನಂದ ಸ್ವಾಮೀಜಿ, ಕ್ಷತ್ರಿಯ ಪೀಠದ ಶ್ರೀ ವಿಶ್ವಾೀರಾಜ ತೀರ್ಥ ಸ್ವಾಮೀಜಿ ಮಾತನಾಡಿದರು. ವಾಸುದೇವ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News