×
Ad

ಕೇರಳ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ !: ಕೇಂದ್ರ ಸಚಿವ ಪಾಸ್ವಾನ್ ಟ್ವೀಟ್ ವೈರಲ್

Update: 2017-01-26 12:59 IST

ಹೊಸದಿಲ್ಲಿ,ಜ.26: ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಕೇರಳ ಮತ್ತು ತಮಿಳ್ನಾಡಿನ ಮುಖ್ಯಮಂತ್ರಿಗಳನ್ನು ಗುರುತಿಸಲು ವಿಫಲರಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಸಿನ ಚರ್ಚೆ ನಡೆದಿದೆ. ಕೇರಳದ ಪಡಿತರ ಸಮಸ್ಯೆಯನ್ನು ಬಗೆಹರಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳೆದ ದಿವಸ ರಾಮ್ ವಿಲಾಸ್ ಪಾಸ್ವಾನ್‌ರನ್ನು ಭೇಟಿಯಾಗಿಚರ್ಚಿಸಿದ್ದರು. ಅದರ ಬೆನ್ನಿಗೆ ಪಾಸ್ವಾನ್‌ರ ಟ್ವಿಟರ್ ಸಂದೇಶ ಬಂದಿತ್ತು.

 ಕೇರಳ ಮುಖ್ಯಮಂತ್ರಿ ಪನ್ನೀರ್ ಸೆಲ್ವಂರೊಂದಿಗೆ ಭೇಟಿಯಾಗಿದ್ದೇನೆ ಎಂದು ಪಾಸ್ವಾನ್ ಬರೆದಿದ್ದರು. ಅವರ ನಿವಾಸದಲ್ಲಿ ಪಾಸ್ವಾನ್‌ರಿಗೆ ಹಸ್ತಲಾಘವ ಮಾಡಿ ನಿಂತ ಪಿಣರಾಯಿ ವಿಜಯನ್‌ರ ಚಿತ್ರವನ್ನು ಸಂದೇಶದೊಂದಿಗೆ ಟ್ವಿಟರ್‌ನಲ್ಲಿಪೋಸ್ಟ್ ಮಾಡಿದ್ದರು. ಸಂಸದ ಕೆ.ಕೆ. ರಾಘೇಶ್ ಜೊತೆಗಿದ್ದರು. ಇದು ವ್ಯಾಪಕ ಚರ್ಚೆ ಯಾದ ಬಳಿಕ ನಡೆದಿರುವ ಪ್ರಮಾದ ಸಚಿವರ ಕಚೇರಿಯ ಗಮನಕ್ಕೆ ಬಂದಿತ್ತು. ನಂತರ ಪಾಸ್ವಾನ್ ತಮ್ಮಿಂದಾದ ತಪ್ಪನ್ನು ತಿದ್ದಿ ಟ್ವಿಟರ್‌ನಲ್ಲಿ ಹೊಸ ಸಂದೇಶ ಹಾಕಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News