ಅಸ್ಸಾಂ, ಮಣಿಪುರದಲ್ಲಿ ಉಗ್ರರ ಅಟ್ಟಹಾಸ
Update: 2017-01-26 13:17 IST
ಗುವಾಹಟಿ, ಜ.26: ದೇಶ 68ನೆ ಗಣರಾಜ್ಯೋತ್ಸವ ಸಂಭ್ರದಲ್ಲಿದ್ದಾಗ ಅಸ್ಸಾಂ ಮತ್ತು ಮಣಿಪುರದಲ್ಲಿ ಉಗ್ರರು ಒಟ್ಟು 9 ಕಡೆ ಬಾಂಬ್ ದಾಳಿ ನಡೆಸಿದ್ದಾರೆ. ಆದರೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಅಸ್ಸಾಂನ ಚರಾಯಿಡಿಯೊ ಜಿಲ್ಲೆಯಲ್ಲಿ ಮೂರು, ಸಿವಾಸಾಗರ್ ಜಿಲ್ಲೆಯ ಎರಡು ಕಡೆ, ದಿಬ್ರುಗರ್ ಮತ್ತು ತಿನ್ಸುಕಿಯಾ ಜಿಲ್ಲೆಯಲ್ಲಿ ಎರಡು ಬಾಂಬ್ ಸ್ಫೋಟ ಪ್ರಕರಣ ವರದಿಯಾಗಿದೆ.
ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯ ಮಂಟ್ರಿಪುಕುರಿ ಮತ್ತು ಮಣಿಪುರ ಕಾಲೇಜಿನ ಬಳಿ ಬಾಂಬ್ ಸ್ಫೋಟ ಸಂಭವಿಸಿದೆ. ಬಾಂಬ್ ಸ್ಫೋಟದ ಹಿಂದೆ ಉಲ್ಫಾ ಉಗ್ರರ ಕೈವಾಡ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.