ರಷ್ಯಾ ರಾಯಭಾರಿ ಕದಾಕಿನ್ ನಿಧನ

Update: 2017-01-26 09:12 GMT

ಹೊಸದಿಲ್ಲಿ,ಜ.26: ಭಾರತದಲ್ಲಿ ರಷ್ಯಾದ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಲೆಕ್ಸಾಂಡರ್ ಕದಾಕಿನ್(68) ಅವರು ಗುರುವಾರ ಬೆಳಿಗ್ಗೆ ಇಲ್ಲಿ ಹೃದಯಾಘಾತದಿಂದ ನಿಧನರಾದರು.

 ಭಾರತ ಮತ್ತು ರಷ್ಯಾ ನಡುವೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸುವಲ್ಲಿ ತನ್ನ ಪ್ರಯತ್ನಕ್ಕಾಗಿ ರಷ್ಯಾದ ಅಧ್ಯಕ್ಷರ ಚೀಫ್ ಆಫ್ ಸ್ಟಾಫ್ ಸೆರ್ಗಿ ಇವಾನೋವ್ ಅವರಿಂದ ಕಳೆದ ವರ್ಷದ ಜುಲೈನಲ್ಲಿ ಆರ್ಡರ್ ಆಫ್ ಫ್ರೆಂಡ್‌ಶಿಪ್ ಪ್ರಶಸ್ತಿಗೆ ಅವರು ಪಾತ್ರರಾಗಿದ್ದರು.

ಕದಾಕಿನ್ 2009ರಿಂದ ಭಾರತದಲ್ಲಿ ರಷ್ಯಾದ ರಾಯಭಾರಿಯಾಗಿದ್ದರು.

ಪ್ರಧಾನಿ ನರೇಂದ್ರ ಮೋದಿಯವರು ಕದಾಕಿನ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News