×
Ad

‘ಸಹ ಆಟಗಾರರಿಗೆ ಎಲ್ಲ ಶ್ರೇಯಸ್ಸು ಸಲ್ಲಬೇಕು’

Update: 2017-01-26 21:09 IST

ಬೆಂಗಳೂರು, ಜ.26: ‘‘ಅಂಧರ ಕ್ರಿಕೆಟ್‌ನಿಂದಾಗಿ ನನಗೆ ಈ ಗೌರವ ಲಭಿಸಿದೆ. ಅಂಧತ್ವ ನನಗೆ ಅವಕಾಶ ನೀಡಿತು. ನಾನು ಹುಟ್ಟು ಕುರುಡನಾಗಿದ್ದ ಕಾರಣ ಎಲ್ಲ ಅಡೆತಡೆಗಳನ್ನು ದಾಟಿ ಬರಲು ಕಷ್ಟಪಟ್ಟಿದ್ದೆ. ಇದೀಗ ನಾನು ಕ್ರಿಕೆಟ್‌ನಿಂದಾಗಿಯೇ ದೇಶವನ್ನು ಪ್ರತಿನಿಧಿಸುವ ಅವಕಾಶ ಲಭಿಸಿದ್ದು ದೇವರ ಕೊಡುಗೆಯಾಗಿದೆ. ನನ್ನೊಂದಿಗೆ ಆಡಿರುವ ಸಹ ಆಟಗಾರರಿಗೆ ಶ್ರೇಯಸ್ಸು ಸಲ್ಲಬೇಕಾಗಿದೆ. ಅವರು ನನಗೆ ಬೆಂಬಲ ನೀಡುತ್ತಾ ಕ್ರಿಕೆಟ್ ಆಡಲು ವೇದಿಕೆ ಒದಗಿಸಿದ್ದಾರೆ’’ ಎಂದು ಈ ವರ್ಷ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡಿಗ, ಭಾರತದ ಅಂಧರ ಕ್ರಿಕೆಟ್ ತಂಡದ ನಾಯಕ ಶೇಖರ್ ನಾಯ್ಕ್ ಹೇಳಿದ್ದಾರೆ.

‘‘2010ರಲ್ಲಿ ಭಾರತದ ಅಂಧ ಕ್ರಿಕೆಟ್ ತಂಡದ ನಾಯಕನಾಗಬೇಕೆಂಬ ನನ್ನ ಕನಸು ಕೈಗೂಡಿತ್ತು. ನನ್ನ ನಾಯಕತ್ವದಲ್ಲಿ 2 ವಿಶ್ವಕಪ್ ಗೆದ್ದುಕೊಂಡಿದ್ದೇವೆ. ನಾನು 82 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೆ. ನನಗೆ ವೇದಿಕೆ ಒದಗಿಸಿದ್ದ ಬೆಂಗಳೂರಿನ ಸಮರ್ಥಂ ಟ್ರಸ್ಟ್ ಹಾಗೂ ಸಿಎಬಿಐಗೆ ಕೃತಜ್ಞತೆ ಸಲ್ಲಿಸುವೆನು’’ ಎಂದು ನಾಯ್ಕ್ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News