×
Ad

ರಾಜ್ಯಾದ್ಯಂತ ಗಲಭೆ ಹರಡಲು ಆರೆಸ್ಸೆಸ್ ಪ್ರಯತ್ನಿಸುತ್ತಿದೆ: ಸಿಪಿಎಂ

Update: 2017-01-27 12:13 IST

ಲಶ್ಶೇರಿ,ಜ.27: ಕೇರಳಾದ್ಯಂತ ಗಲಭೆ ಹರಡಲು ಆರೆಸ್ಸೆಸ್ ಶ್ರಮಿಸುತ್ತಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ. ಅವರ ಅಕ್ರಮ ಚಟುವಟಿಕೆಗಳ ಕುರಿತು ಜಾಗೃತೆ ವಹಿಸಬೇಕು. ಮತ್ತುಅವರ ಪ್ರಚೋದನೆಗಳಿಗೆಬಲಿಯಾಗದಂತೆ ಎಚ್ಚರವಹಿಸಬೇಕು.

ತಾನು ಭಾಗವಹಿಸಿದ್ದ ಒಂದು ಕಾರ್ಯಕ್ರಮವನ್ನು ಅಸ್ತವ್ಯಸ್ತಗೊಳಿಸಲು ಅರೆಸ್ಸೆಸ್ ಬಾಂಬ್ ಆಕ್ರಮಣ ನಡೆಸಿತು . ಇದು ಪ್ರಚೋದನೆ ಸೃಷ್ಟಿಸಿ ಗಲಭೆಯುಂಟುಮಾಡುವ ಪ್ರಯತ್ನದ ಭಾಗವಾಗಿದೆ ಎಂದು ಕೊಡಿಯೇರಿ ತನ್ನ ಫೇಸ್‌ಬುಕ್ ಪುಟದಲ್ಲಿ ಟೀಕಿಸಿದ್ದಾರೆ.

ಕೇರಳ ಮುಖ್ಯಮಂತ್ರಿ ದಿಲ್ಲಿಗೆ ಭೇಟಿ ನೀಡಿದ್ದಾಗ ಪ್ರಚೋದನೆ ಸೃಷ್ಟಿಸಲು ಆರೆಸ್ಸೆಸ್ ಯತ್ನಿಸಿತ್ತು. ಕಮ್ಯುನಿಸ್ಟ್ ಪಕ್ಷ ನಾಯಕರು ಭಾಗವಹಿಸುವ ಕಾರ್ಯಕ್ರಮದಲ್ಲಿ ಅಕ್ರಮ ನಡೆಸುವ ಮೂಲಕ ಘರ್ಷಣೆ ವ್ಯಾಪಕವಾಗುವಂತೆ ಮಾಡುವುದು ಆರೆಸ್ಸೆಸ್‌ ಉದ್ದೇಶವೆಂದು ಅನಿಸುತ್ತಿದೆ.

ಕೇರಳದಲ್ಲಿ ಅಕ್ರಮ ವ್ಯಾಪಕಗೊಳಿಸುವ ಸಂಘಪರಿವಾರದ ಕ್ರಮಗಳ ಬಗ್ಗೆಎಲ್ಲರೂ ಜಾಗೃತರಾಗಿರಬೇಕು. ಪ್ರಚೋದನೆಗಳಿಗೆ ಕಿವಿಕೊಡದೆ ಶಾಂತ ರೀತಿಯಲ್ಲಿ ಆರೆಸ್ಸೆಸ್ ಆಕ್ರಮಣಗಳ ವಿರುದ್ಧ ಪ್ರತಿಭಟನೆ ನಡೆಸಬೇಕೆಂದು ಕೊಡಿಯೇರಿ ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News