×
Ad

ಕ್ರಿಕೆಟಿಗ ಶಮಿಗೆ ಪಿತೃ ವಿಯೋಗ

Update: 2017-01-27 17:43 IST

ಕಾನ್ಪುರ, ಜ.27: ಭಾರತದ ಕ್ರಿಕೆಟ್ ತಂಡದ ವೇಗದ ಬೌಲರ್ ಮುಹಮ್ಮದ್ ಶಮಿ ಅವರ ತಂದೆ ತೌಸಿಫ್ ಅಲಿ ಹೃದಯಾಘಾತದಿಂದ   ನಿಧನರಾದರು.
 ತೌಸಿಫ್ ಅಲಿ ಹೃದಯಾಘಾತಕ್ಕೊಳಗಾಗಿ ಜ.5ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದು ,  ಪುನಶ್ಚೇತನ ಶಿಬಿರದಲ್ಲಿ ಅಭ್ಯಾಸ ನಡೆಸುತ್ತಿದ್ದ ಶಮಿ ಅವರು ಗುರುವಾರ ರಾತ್ರಿ  ತಂದೆ ನಿಧನರಾದ ಹಿನ್ನೆಲೆಯಲ್ಲಿ ತನ್ನ ಊರು ಕಾನ್ಪುರದ ಅಮ್ರೊಹಾಕ್ಕೆ ಆಗಮಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News