×
Ad

ಸಿಬಿಎಸ್‌ಇ 10,12ನೇ ತರಗತಿಗಳ ಪರೀಕ್ಷೆ ವೇಳಾಪಟ್ಟಿಯ ಪರಿಷ್ಕರಣೆ

Update: 2017-01-27 23:21 IST

ಹೊಸದಿಲ್ಲಿ,ಜ.27: ಪಂಚರಾಜ್ಯಗಳಲ್ಲಿ ಚುನಾವಣೆಗಳ ಹಿನ್ನೆಲೆಯಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯು 10 ಮತ್ತು 12ನೇ ತರಗತಿಗಳ ಪರೀಕ್ಷೆ ವೇಳಾಪಟ್ಟಿಗಳನ್ನು ಪರಿಷ್ಕರಿಸಿದೆ.
10ನೇ ತರಗತಿಯ ಮೂರು ವಿಷಯಗಳ ಮತ್ತು 12ನೇ ತರಗತಿಯ ಐದು ವಿಷಯಗಳ ಪರೀಕ್ಷಾ ದಿನಾಂಕಗಳನ್ನು ಬದಲಿಸಲಾಗಿದೆ.
 ಈ ವರ್ಷ ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆಗಳು ಮಾ.9ರಿಂದ ಎ.10ರವರೆಗೆ ಮತ್ತು 12ನೇ ತರಗತಿಯ ಪರೀಕ್ಷೆಗಳು ಮಾ.9ರಿಂದ ಎ.12ರವರೆಗೆ ನಡೆಯಲಿವೆ. 10ನೇ ತರಗತಿಯ ಪರೀಕ್ಷೆಗಳಿಗೆ 16,67,573 ಮತ್ತು 12ನೇ ತರಗತಿಯ ಪರೀಕ್ಷೆಗಳಿಗೆ 10,98,420 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News