ಬಿಲ್ ಪಾವತಿಸಿದರೂ ವಿದ್ಯುತ್ ಸಂಪರ್ಕ ಕಡಿತ: ಆರೋಪ

Update: 2017-01-27 18:37 GMT

ಕುಂಜತ್ತೂರು, ಜ.27: ವಿದ್ಯುತ್ ಬಿಲ್ ನಿಗದಿತ ಸಮಯದಲ್ಲೇ ಪಾವತಿಸಿದರೂ ಕಾಸರಗೋಡು ಮಾಜಿ ಜಿಲ್ಲಾ ಪಂ. ಅಧ್ಯಕ್ಷರ ಅಂಗಡಿಯೊಂದರ ವಿದ್ಯುತ್ ಸಂಪರ್ಕವನ್ನು ವಿದ್ಯುತ್ ಇಲಾಖೆ ಕಡಿತಗೊಳಿಸಿದೆ ಎಂದು ಆರೋಪಿಸಿ ಅವರು ಮಂಜೇಶ್ವರ ವಿದ್ಯುತ್ ಸೆಕ್ಷನ್ ಅಕೃತರ ವಿರುದ್ಧ ಉನ್ನತ ಅಕಾರಿ ಹಾಗೂ ಸಚಿವರಿಗೆ ದೂರು ನೀಡಲು ಮುಂದಾಗಿದ್ದಾರೆ. 

ಮಂಜೇಶ್ವರ ಗ್ರಾಪಂ ಕಟ್ಟಡ ವೊಂದರಲ್ಲಿ ಕಳೆದ ಹಲವಾರು ವರ್ಷ ಗಳಿಂದ ಆಯುರ್ವೇದಿಕ್ ಔಷಧ ಅಂಗ ಡಿಯನ್ನು ನಡೆಸುತ್ತಿರುವ ಸಿ. ಅಹ್ಮದ್ ಕುಂಞಿ ಅವರು ವಿದ್ಯುತ್ ಬಿಲ್‌ನ್ನು ಜ.4ಕ್ಕೆ ಪಾವತಿ ಮಾಡಿದ್ದರು ಎನ್ನಲಾಗಿದೆ. ಬಿಲ್ ಪಾವತಿಯ ಕೊನೆಯ ದಿನಾಂಕ ಜ.7 ಆಗಿತ್ತು. ಆದರೆ ವಿದ್ಯುತ್ ಇಲಾಖೆಯವರು ಬಿಲ್ ಪಾವತಿಸಲಿಲ್ಲವೆಂಬ ಕಾರಣವನ್ನಿಟ್ಟು ಸಂಪರ್ಕವನ್ನು ಕಡಿತಗೊಳಿಸಿರುವುದಾಗಿ ಅಹ್ಮದ್ ಕುಂಞಿ ಆರೋಪಿಸುತ್ತಿದ್ದಾರೆ. ಬಳಿಕ ವಿದ್ಯುತ್ ಬಿಲ್ ಪಾವತಿಸಿದ ರಶೀದಿಯನ್ನು ಕಚೇರಿಯಲ್ಲಿ ತೋರಿ ಸಿದಾಗ ಈಗಲೇ ಬಂದು ಸಂಪರ್ಕವನ್ನು ಪುನರ್ ನೀಡುವುದಾಗಿ ಹೇಳಿ ಹೋದ ವರು 23 ದಿವಸ ಕಳೆದರೂ ವಿದ್ಯುತ್ ಸಂಪರ್ಕ ನೀಡಿಲ್ಲವೆಂಬುದಾಗಿ ದೂರ ಲಾಗಿದೆ. ಈ ಬಗ್ಗೆ ದೂರವಾಣಿ ಮೂಲಕ ವಿದ್ಯುತ್ ಅಕಾರಿಗಳನ್ನು ಸಂಪರ್ಕಿಸಿದಾಗಲೂ ಯಾವುದೇ ಪ್ರತಿ ಕ್ರಿಯೆ ಇಲ್ಲವೆನ್ನಲಾಗಿದೆ. ಈ ಹಿನ್ನೆಲೆ ಯಲ್ಲಿ ವಿದ್ಯುತ್ ಇಲಾಖೆಯ ಡೈರೆಕ್ಟರ್ ಬೋರ್ಡ್, ವಿಜಿಲೆನ್ಸ್ ವಿಭಾಗ ಹಾಗೂ ವಿದ್ಯುತ್ ಸಚಿವರಿಗೆ ದೂರು ನೀಡುವುದಾಗಿ ವಾರ್ತಾಭಾರತಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News