ಮಲೇಷ್ಯಾದಲ್ಲಿ ಚೀನಾದ 28 ಪ್ರವಾಸಿರ ದೋಣಿ ನಾಪತ್ತೆ
Update: 2017-01-29 11:32 IST
ಕೌಲಾಲಂಪುರ, ಅ.29: ಚೀನಾದ 28 ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಮಲೇಷ್ಯಾದ ದ ಬೊರ್ನಿಯೊ ದ್ವೀಪದಲ್ಲಿ ಕಣ್ಣರೆಯಾಗಿದೆ.
ಪೂರ್ವ ಮಲೇಷ್ಯಾದ ಸಬಾಹ್ ರಾಜ್ಯದ ಕೋಟ ಕಿನಾಬಾಲು ಎಂಬಲ್ಲಿಂದ ಶನಿವಾರ ಬೆಳಗ್ಗೆ ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿರುವ ಮೆಂಗಲಮ್ ದ್ವೀಪಕ್ಕೆ ಹೊರಟಿತ್ತು. ಆದರೆ ದಾರಿ ಮಧ್ಯೆ ಸಮುದ್ರದಲ್ಲಿ ಕಾಣೆಯಾಗಿದೆ. ದೋಣಿಯಲ್ಲಿ ಒಟ್ಟು31 ಮಂದಿ ಇದ್ದರು.ಇದರಲ್ಲಿ 28 ಮಂದಿ ಚೀನಾದ ಪ್ರವಾಸಿಗರು ಎಂದು ತಿಳಿದು ಬಂದಿದೆ. ಪ್ರತಿಕೂಲ ಹವಾಮಾನದಿಂದಾಗಿ ನಾಪತ್ತೆಯಾಗಿರುವ ದೋಣಿಯ ಪತ್ತೆ ಹಚ್ಚುವ ಕಾರ್ಯಾಚರಣೆಗೆ ಅಡ್ಡಿಯಾಗಿದೆ.