×
Ad

ವಿಕ್ಟೋರಿಯ: ಬೆಂಕಿಯಲ್ಲಿ ಬೆಂದ ಮಸೀದಿ

Update: 2017-01-29 21:38 IST

ವಿಕ್ಟೋರಿಯ (ಟೆಕ್ಸಾಸ್), ಜ. 29: ಹಲವು ವರ್ಷಗಳ ಹಿಂದೆ ದ್ವೇಷ ದಾಳಿಗೆ ಗುರಿಯಾಗಿದ್ದ ಹಾಗೂ ಒಂದು ವಾರದ ಹಿಂದೆ ಕಳ್ಳತನ ನಡೆದಿದ್ದ ಟೆಕ್ಸಾಸ್‌ನ ಮಸೀದಿಯೊಂದು ಶನಿವಾರ ಮುಂಜಾನೆ ಬೆಂಕಿಯಲ್ಲಿ ಸುಟ್ಟು ಹೋಗಿದೆ.

ಮುಂಜಾನೆ 2 ಗಂಟೆ ಸುಮಾರಿಗೆ ವಿಕ್ಟೋರಿಯದ ಇಸ್ಲಾಮಿಕ್ ಸೆಂಟರ್‌ನಿಂದ ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಹೊಮ್ಮುತ್ತಿರುವುದನ್ನು ಕಂಡ ಸಮೀಪದ ಅಂಗಡಿಯೊಂದರ ಗುಮಾಸ್ತರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು.
ಬೆಂಕಿಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News