×
Ad

​ಟ್ರಂಪ್ ಪಾಕ್ ಮೇಲೆ ವೀಸಾ ನಿರ್ಬಂಧ ಹಾಕಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಇಮ್ರಾನ್ ಖಾನ್ ಹೇಳಿದ್ದೇಕೆ ?

Update: 2017-01-30 12:02 IST

ಇಸ್ಲಾಮಾಬಾದ್, ಜ.30: ಟ್ರಂಪ್ ಪಾಕ್ ಮೇಲೆ ವೀಸಾ ನಿರ್ಬಂಧ ಹಾಕಲಿ ಎಂದು ನಾನು ಆಶಿಸುತ್ತೇನೆ ಎಂದು ರಾಜಕಾರಣಿ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಹೇಳಿದ್ದು, ಹಾಗೆ ಮಾಡಿದ್ದಲ್ಲಿ ಪಾಕಿಸ್ತಾನಿಗಳು ತಮ್ಮ ದೇಶದ ಅಭಿವೃದ್ಧಿಯತ್ತ ಹೆಚ್ಚಿನ ಗಮನ ನೀಡಲು ಆಸ್ಪದ ನೀಡುವುದು ಎಂದಿದ್ದಾರೆ.

ಲಾಹೋರ್ ನಿಂದ ಸುಮಾರು 250 ಕಿ.ಮೀ. ದೂರದಲ್ಲಿರುವ ಸಹಿವಾಲ್ ನಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಇಮ್ರಾನ್, ಟ್ರಂಪ್ ಪಾಕಿಸ್ತಾನೀಯರಿಗೆ ವೀಸಾ ನೀಡುವುದನ್ನು ನಿರಾಕರಿಸಿದ್ದೇ ಆದಲ್ಲಿ ಅದು ನಮಗೆ ಸಹಾಯ ಮಾಡುವುದು. ಅಷ್ಟೇ ಅಲ್ಲದೆ ನಾವು ಕೂಡ ಅವರಿಗೆ ಇರಾನ್ ನಂತಹುದೇ ಪ್ರತಿಕ್ರಿಯೆ ನೀಡುತ್ತೇವೆ, ಅಮೆರಿಕನ್ನರಿಗೆ ಇಲ್ಲಿಗೆ ಪ್ರವೇಶ ನಿರಾಕರಿಸುತ್ತೇವೆ,’’ ಎಂದು ಹೇಳಿದರು.

ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುವ ಪಾಕ್ ಪ್ರಧಾನಿ ನವಾಝ್ ಶರೀಫ್ ಅವರನ್ನು ಟೀಕಿಸಿದ ಇಮ್ರಾನ್ ‘‘ನವಾಝ್ ಶರೀಫ್ ಅವರು ತಲೆನೋವಿನ ಚಿಕಿತ್ಸೆಗಾಗಿಯೂ ವಿದೇಶಕ್ಕೆ ಹೋಗುತ್ತಾರೆ.ಅಮೆರಿಕಾ ಪಾಕಿಸ್ತಾನೀಯರ ಮೇಲೆ ನಿಷೇಧ ಹೇರಿದರೆ ಅವರು ಕೂಡ ಪಾಕ್ ಅಭಿವೃದ್ಧಿಯತ್ತ ಗಮನ ಹರಿಸುವರು,’’ ಎಂದಿದ್ದಾರೆ.

ಭಾರತ ಪಾಕ್ ಸಂಬಂಧಗಳ ಬಗ್ಗೆ ಮಾತನಾಡಿದ ಇಮ್ರಾನ್ ‘‘ ಪ್ರತಿಯೊಬ್ಬ ಪಾಕಿಸ್ತಾನಿ ನವಾಝ್ ಶರೀಫ್ ಅವರಂತೆ ಹೇಡಿಯಲ್ಲ ಎಂದು ಮೋದಿಗೆ ನೆನಪಿಸಲಿಚ್ಛಿಸುತ್ತೇನೆ. ನಾವು ಒಂದು ಶಾಂತಿಯುತ ದೇಶವಾಗಿದ್ದು ಭಾರತದಲ್ಲಿನ ಬಹುಸಂಖ್ಯಾತ ಮಂದಿ ಕೂಡ ಪಾಕಿಸ್ತಾನದೊಂದಿಗೆ ಯುದ್ಧ ಬಯಸುವುದಿಲ್ಲ,’’ಎಂದು ಇಮ್ರಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News