ಈ ಕಳಂಕಿತ ಬ್ರ್ಯಾಂಡ್ ಈಗ ವಿಶ್ವದ ಅತಿ ದೊಡ್ಡ ಅಟೋಮೊಬೈಲ್ ಸಂಸ್ಥೆ
ಟೋಕಿಯೊ, ಜ.30: 2015ರಲ್ಲಿ ವಾಯು ಮಾಲಿನ್ಯ ತಪಾಸಣೆ (ಎಮಿಶನ್ ಟೆಸ್ಟ್) ವಿಚಾರದಲ್ಲಿ ವಂಚನೆ ಆರೋಪ ಎದುರಿಸಿ ದೊಡ್ಡ ಹಗರಣದಲ್ಲಿ ಸಿಲುಕಿದ್ದ ಪೋಕ್ಸ್ ವ್ಯಾಗನ್ ತಯಾರಕ ಸಂಸ್ಥೆ ಜರ್ಮನ್ ಮೋಟಾರ್ಸ್, ಇದೀಗ ಟೊಯೊಟಾ ಮೋಟಾರ್ಸ್ ಕಂಪೆನಿಯನ್ನು ಹಿಂದಿಕ್ಕಿ ವಿಶ್ವದ ಅತಿ ದೊಡ್ಡ ಅಟೋಮೊಬೈಲ್ ಸಂಸ್ಥೆಯೆಂದು ಪರಿಗಣಿಸಲ್ಪಟ್ಟಿದೆ. ಟೊಯೊಟಾ 2016ರಲ್ಲಿ ವಿಶ್ವದಾದ್ಯಂತ 10.175 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಿದ್ದರೆ ಫೋಕ್ಸ್ ವ್ಯಾಗನ್ 10.31 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಿದೆ.
ಜನರಲ್ ಮೋಟಾರ್ಸ್ ತನ್ನ ವಾಹನ ಮಾರಾಟ ಸಂಖ್ಯೆಯ ಮಾಹಿತಿಯನ್ನು ಮುಂದಿನ ವಾರ ನೀಡಲಿದ್ದು ಪೋಕ್ಸ್ ವ್ಯಾಗನ್ ಮಾರಾಟ ಸಂಖ್ಯೆಗಿಂತ ಅದು ಕಡಿಮೆಯಾಗಿದ್ದಲ್ಲಿಅದು ತನ್ನ ಮೊದಲ ಸ್ಥಾನವನ್ನು ಜನರಲ್ ಮೋಟಾರ್ಸ್ ಗೆ ಬಿಟ್ಟು ಕೊಡಬೇಕಾಗಬಹುದು.
ದೊಡ್ಡ ಹಗರಣವೊಂದರಲ್ಲಿ ಸಿಲುಕಿದ ಹೊರತಾಗಿಯೂ ಜಗತ್ತಿನ ನಂ. 1 ಅಟೋಮೊಬೈಲ್‌ಸಂಸ್ಥೆ ಎಂಬ ಹೆಗ್ಗಳಿಕೆ ಫೋಕ್ಸ್ ವಾಗನ್ ಸಂಸ್ಥೆಯ ದೊಡ್ಡ ಸಾಧನೆಯಾಗುವುದು.. ಚೀನಾದಲ್ಲಿ ಸಂಸ್ಥೆಯ ಹೆಚ್ಚು ವಾಹನಗಳು ಮಾರಾಟವಾಗುತ್ತಿರುವುದು ಈ ಬೆಳವಣಿಗೆಗೆ ಕಾರಣ.
ಜಪಾನಿನ ಟೊಯೊಟಾ ಮೋಟಾರ್ಸ್ ಕಳೆದ ನಾಲ್ಕು ವರ್ಷಗಳಿಂದ ನಂ 1 ಸ್ಥಾನದಲ್ಲಿದೆ. 2011ರಲ್ಲಿ ಅದು ಜನರಲ್ ಮೋಟಾರ್ಸ್ ಗಿಂತ ಸುನಾಮಿಯ ಹಾಗೂ ಭೂಕಂಪದ ಕಾರಣದಿಂದ ಹಿಂದೆ ಬಿದ್ದಿದ್ದರೂ ನಂತರ ಸಾವರಿಸಿಕೊಂಡಿತ್ತು.
ಡೆಟ್ರಾಯಿಟ್ ಮೂಲದ ಜರ್ಮನ್ ಮೋಟಾರ್ಸ್ ಏಳು ದಶಕಗಳ ಕಾಲ ವಿಶ್ವದ ಸರ್ವಶ್ರೇಷ್ಠ ಅಟೋಮೊಬೈಲ್ ಸಂಸ್ಥೆಯಾಗಿದ್ದರೆ, 2008ರಲ್ಲಿ ಅದು ತನ್ನ ಸ್ಥಾನವನ್ನು ಟೊಯೊಟಾ ಕಂಪೆನಿಗೆ ಬಿಟ್ಟುಕೊಡಬೇಕಾಗಿತ್ತು.