×
Ad

ಫೇಸ್‌ಬುಕ್‌ನಲ್ಲಾದರೂ ಶೋಕ ವ್ಯಕ್ತಪಡಿಸಬಹುದಿತ್ತಲ್ಲ: ಕೇರಳ ಮುಖ್ಯಮಂತ್ರಿಯನ್ನು ಪ್ರಶ್ನಿಸಿದ ಮೃತ ಜಿಷ್ಣುವಿನ ಅಮ್ಮ

Update: 2017-01-30 15:42 IST

ಕಲ್ಲಿಕೋಟೆ, ಜ. 30: ಪಾಂಪಡಿ ನೆಹರೂ ಕಾಲೇಜಿನಲ್ಲಿ ನಿಗೂಢವಾಗಿ ಮೃತಪಟ್ಟ ಜಿಷ್ಣು ಎಂಬ ವಿದ್ಯಾರ್ಥಿಯ ಅಮ್ಮ ಮಹಿಜಾ,ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಪತ್ರಬರೆದು ತನ್ನ ಪುತ್ರನ ಮರಣಕ್ಕೆ ಕನಿಷ್ಠ ಫೇಸ್‌ಬುಕ್‌ನಲ್ಲಾದರೂ ನೀವೇಕೆ ಶೋಕ ವ್ಯಕ್ತಪಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.ತಾನು ಮುಖ್ಯಮಂತ್ರಿಗೆ ಮೂರು ಪತ್ರ ಬರೆದಿದ್ದೇನೆ ಯಾವ ಪತ್ರಕ್ಕೂ ಮುಖ್ಯಮಂತ್ರಿ ಉತ್ತರಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ನೆಹರೂ ಕಾಲೇಜಿನ ಮ್ಯಾನೇಜ್‌ಮೆಂಟ್ ವಿರುದ್ಧ ನೀವು ಒಂದಕ್ಷರವೂ ಯಾಕೆ ಮಾತಾಡಿಲ್ಲ ಎಂದು ಜಿಷ್ಣುತಾಯಿ ಮುಖ್ಯಮಂತ್ರಿಯನ್ನು ಕೇಳಿದ್ದಾರೆ.

ಮಹಿಜಾ ಹಳೆಯ ಎಸ್‌ಎಫ್‌ಐ ಕಾಯಕರ್ತೆಯಾಗಿದ್ದಾರೆ. ಪುತ್ರನನ್ನು ಕಳಕೊಂಡು 23 ದಿನ ಆಗಿದೆ ಮೂರು ಪತ್ರ ಬರೆದೆ. ಆದರೂ ಮುಖ್ಯಮಂತ್ರಿ ಮೌನಕ್ಕೆ ಶರಣಾಗಿದ್ದಾರೆ. ಫೇಸ್‌ಬುಕ್‌ನಲ್ಲಾದರೂ ಶೋಕವನ್ನಾಗಲಿ, ಸಾಂತ್ವನವನ್ನಾಗಲಿ ಮುಖ್ಯಮಂತ್ರಿ ವ್ಯಕ್ತಪಡಿಸದ್ದರಿಂದ ತುಂಬಾನೋವಾಗಿದೆ ಎಂದು ಮಹಿಜಾ ಹೇಳಿದ್ದಾರೆ.

ಮಹಿಜಾ ಪೊಲೀಸ್ ತನಿಖೆಯಲ್ಲಿ ಅತೃಪ್ತಿಯನ್ನೂ, ಪೋಸ್ಟ್ ಮಾರ್ಟಂನ ನಿಗೂಢತೆಯನ್ನೂ ಮುಖ್ಯಮಂತ್ರಿಗೆ ವಿವರಿಸಿದ್ದರು. ನಮ್ಮನ್ನು ನಿರಾಶೆಪಡಿಸಬಾರದು. ಕೇರಳದ ಮುಂದಿನ ತಲೆಮಾರಿಗಾಗಿ ತಾವು ಧ್ವನಿಯೆತ್ತುವಿರಿಎಂದು ಇನ್ನೂ ನನ್ನಲ್ಲಿ ನಿರೀಕ್ಷೆ ಇದೆ ಎಂದು ಮಹಿಜಾ ಪಿಣರಾಯಿಗೆ ತಿಳಿಸಿದ್ದಾರೆ.

 ನಾನು ಮಹಿಜಾ. ನನ್ನ ಪರಿಚಯ ನಿಮಗಿರಲಾರದು. ಆದರೆ ನನ್ನ ಮಗನ ಕುರಿತು ನೀವು ಎಲ್ಲಾದರೂ ಕೇಳಿರಬಹುದು. ತೃಶೂರ್ ಪಾಂಪಡಿ ನೆಹರೂ ಕಾಲೇಜಿನಲ್ಲಿ ಬಿಟೆಕ್ ಕಂಪ್ಯೂಟರ್ ಸಯನ್ಸ್ ಒಂದನೆ ವರ್ಷದ ವಿದ್ಯಾರ್ಥಿ ಜಿಷ್ಣು ಪ್ರಣೋಯ್(18)ನ ನಿಗೂಢ ಮರಣಕ್ಕೆ ಸಂಬಂಧಿಸಿ ನಿಮಗೆ ಮೂರು ಪತ್ರ ಬರೆದಿರುವೆ. ನೀವು ಯಾವುದಕ್ಕೂ ಉತ್ತರಿಸಿಲ್ಲ. ಆದ್ದರಿಂದ ನಾನು ಈ ಬಹಿರಂಗ ಪತ್ರ ಬರೆಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News