ಕಣ್ಣೂರಿನಲ್ಲಿ ಹಿರಿಯ ಕಾಂಗ್ರೆಸ್ ನಾಯಕನಿಗೆ ಹಲ್ಲೆ
Update: 2017-01-30 17:40 IST
ಕಣ್ಣೂರ್,ಜ.30: ಇಲ್ಲಿಗೆ ಸಮೀಪದ ಪತ್ತಾಯಕುನ್ನ್ ಎಂಬಲ್ಲಿ ಕಾಂಗ್ರೆಸ್‌ನ ಕೂತ್‌ಪರಂಬ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸದಸ್ಯ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣನ್ ಮಾಸ್ಟರ್‌ಗೆ ಗುಂಪೊಂದು ಹಲ್ಲೆ ನಡೆಸಿದೆ. ಬೆಳಗ್ಗೆ ಏಳುಗಂಟೆ ಹೊತ್ತಿಗೆ ಪಾಟ್ಯಂ ಪತ್ತಾಯಕುನ್ನ್‌ನಲ್ಲಿರುವ ಬಾಲಕೃಷ್ಣನ್ ಮಾಸ್ಟರ್‌ರ ಬೇಕರಿಯಲ್ಲಿ ಅವರ ಮೇಲೆಹಲ್ಲೆ ನಡೆದಿದೆ.
ದೇಹ ತುಂಬಾ ಗಾಯಗಳಾಗಿದ್ದ ಅವರನ್ನು ತಲಶ್ಶೇರಿ ಇಂದಿರಾಗಾಂಧಿ ಆಸ್ಪತ್ರೆಗೆ ಸೇರಿಸಲಾಗಿದೆ. ಬಾಲಕೃಷ್ಣನ್‌ರಿಗೆ ಬಿಜೆಪಿ ಹಲ್ಲೆ ನಡೆಸಿದೆ ಎಂದು ಡಿಸಿಸಿ ಅಧ್ಯಕ್ಷ ಸತೀಶನ್ ಪಾಚ್ಚೇನಿ ಅರೋಪಿಸಿದ್ದಾರೆಂದು ವರದಿತಿಳಿಸಿದೆ.