ಮುಯ್ಯಿಗೆ ಮುಯ್ಯಿ: ಅಮೆರಿಕನ್ನರ ಮೇಲೆ ಇರಾಕ್ ನಿಷೇಧ
Update: 2017-01-30 21:53 IST
ಬಗ್ದಾದ್, ಜ. 30: ಇರಾಕಿಗಳ ಮೇಲೆ ವಿಧಿಸಿರುವ ಅಮೆರಿಕ ಪ್ರಯಾಣ ನಿಷೇಧವನ್ನು ಹಿಂದಕ್ಕೆ ಪಡೆದುಕೊಳ್ಳಲು ಅಮೆರಿಕ ನಿರಾಕರಿಸಿದರೆ, ಅದಕ್ಕೆ ಪ್ರತಿಯಾಗಿ ಅಮೆರಿಕನ್ನರ ಮೇಲೆ ನಿಷೇಧ ವಿಧಿಸುವ ಕಾನೂನು ರೂಪಿಸುವಂತೆ ಸರಕಾರಕ್ಕೆ ಕರೆ ನೀಡುವ ನಿರ್ಣಯವನ್ನು ಇರಾಕ್ ಸಂಸದರು ಸೋಮವಾರ ಅಂಗೀಕರಿಸಿದ್ದಾರೆ.
‘‘ಅಮೆರಿಕದ ಮಾದರಿಯಲ್ಲೇ ಪ್ರತಿಕ್ರಿಯಿಸುವಂತೆ ಇರಾಕ್ ಸರಕಾರ ಮತ್ತು ವಿದೇಶ ಸಚಿವಾಲಯಕ್ಕೆ ಕರೆ ನೀಡುವ ನಿರ್ಣಯವನ್ನು ಸಂಸತ್ತು ಬಹುಮತದಿಂದ ಅಂಗೀಕರಿಸಿದೆ’’ ಎಂದು ಸಂಸದ ಹಕೀಮ್ ಅಲ್-ಝಮೀಲಿ ಹೇಳಿದರು.
‘‘ಅಮೆರಿಕ ಸರಕಾರ ತನ್ನ ನಿರ್ಧಾರವನ್ನು ಪುನರ್‌ಪರಿಶೀಲಿಸುವುದು ಎಂಬ ವಿಶ್ವಾಸ ನಮಗಿದೆ’’ ಎಂದು ಇನ್ನೋರ್ವ ಸಂಸದ ಸಾದಿಕ್ ಅಲ್ ಲಬನ್ ಹೇಳಿದರು.