×
Ad

ಇ.ಡಿ. ನಿರ್ದೇಶಕರ ನೇಮಕಕ್ಕೆ ಹೊಸ ಆದೇಶ : ಸುಪ್ರೀಂ ಸೂಚನೆ

Update: 2017-01-30 22:32 IST

ಹೊಸದಿಲ್ಲಿ, ಜ.30: ಕರ್ನಲ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ)ಯ ನಿರ್ದೇಶಕರನ್ನಾಗಿ ನೇಮಕ ಮಾಡಿರುವ ಬಗ್ಗೆ ಹೊಸ ಆದೇಶವನ್ನು ಜಾರಿಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

ಕರ್ನಲ್ ಸಿಂಗ್ ಅವರನ್ನು ಇ.ಡಿ.ಯ ನಿರ್ದೇಶಕರನ್ನಾಗಿ ನೇಮಿಸುವ ಆದೇಶವನ್ನು ಕಳೆದ ವರ್ಷದ ಅಕ್ಟೋಬರ್ 27ರಂದು ಜಾರಿಗೊಳಿಸಲಾಗಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಕೋರ್ಟ್‌ನ ವಿಭಾಗೀಯ ಪೀಠಕ್ಕೆ ತಿಳಿಸಿದರು.

ಆದರೆ ಅವರ ಸೇವಾವಧಿಯ ವಿವರ ಈ ಆದೇಶದಲ್ಲಿ ಇಲ್ಲ ಎಂಬುದನ್ನು ತಿಳಿಸಿದ ಕೋರ್ಟ್, ಕಳೆದ ವರ್ಷದ ಅಕ್ಟೋಬರ್ 27ರಿಂದ ಎರಡು ವರ್ಷದ ಅವಧಿಗೆ ಕರ್ನಲ್ ಸಿಂಗ್ ಅವರನ್ನು ನೇಮಿಸಲಾಗಿದೆ ಎಂದು ಸ್ಪಷ್ಟವಾಗಿ ತಿಳಿಸುವ ಹೊಸ ಆದೇಶವನ್ನು ಒಂದು ವಾರದೊಳಗೆ ಜಾರಿಗೊಳಿಸುವಂತೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News