ಭ್ರಷ್ಟಾಚಾರ: ಬಿಎಸ್‌ಎನ್‌ಎಲ್ ಮಾಜಿ ಎಜಿಎಂಗೆ ಮೂರು ವರ್ಷ ಜೈಲು,27 ಲ.ರೂ.ದಂಡ

Update: 2017-01-30 17:06 GMT

ಹೊಸದಿಲ್ಲಿ,ಜ.30: ಅಕ್ರಮ ಸಂಪತ್ತು ಹೊಂದಿದ್ದ ಪ್ರಕರಣದಲ್ಲಿ ಗುಜರಾತ್‌ನ ಭಾವನಗರದಲ್ಲಿ ಬಿಎಸ್‌ಎನ್‌ಎಲ್‌ನ ಸಹಾಯಕ ಮಹಾಪ್ರಬಂಧಕರಾಗಿದ್ದ ಕಿರಣ್ ಪ್ರೇಮಚಂದ್ ಪಟೇಲ್ ಅವರನ್ನು ದೋಷಿಯೆಂದು ಘೋಷಿಸಿರುವ ಅಹ್ಮದಾಬಾದ್‌ನ ವಿಶೇಷ ಸಿಬಿಐ ನ್ಯಾಯಾಲಯವು,ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 27 ಲ.ರೂ.ಗಳ ಭಾರೀ ದಂಡವನ್ನು ವಿಧಿಸಿದೆ.

 1997,ಜನವರಿ-2004,ಜನವರಿ ಅವಧಿಯಲ್ಲಿ ಪಟೇಲ್ ಅವರು ತನ್ನ ನಿಜವಾದ ಆದಾಯಕ್ಕಿಂತ ಶೇ.148ರಷ್ಟು ಅಕ್ರಮ ಸಂಪತ್ತನ್ನು (29.84ಲ.ರೂ.) ಹೊಂದಿದ್ದರು ಎಂದು ಸಿಬಿಐ ಆಪಾದಿಸಿತ್ತು.

ಪ್ರಕರಣದಲ್ಲಿ ಸಹಆರೋಪಿಗಳಾಗಿದ್ದ ಪಟೇಲ್ ಅವರ ಪತ್ನಿ ಮತ್ತು ಪುತ್ರನನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News