ಶೇ.40ರಷ್ಟು ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ: ಮರ್ಲಿನ್ ಮಾರ್ಟಿಸ್

Update: 2017-01-30 18:33 GMT

ಮಂಗಳೂರು, ಜ.30: ಕೌಟುಂಬಿಕ ದೌರ್ಜನ್ಯದಿಂದ ಇಡೀ ಕುಟುಂಬದ ಸ ದಸ್ಯರು ಹಿಂಸೆಯಿಂದ ತತ್ತರಿಸಿ ಹೋಗುತ್ತಾರೆ. ದೇಶದಲ್ಲಿ ಶೇ.40ರಷ್ಟು ಮಹಿಳೆಯರು ಈ ರೀತಿಯ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಡೀಡ್ಸ್ ಸಂಸ್ಥೆಯ ನಿರ್ದೇಶಕಿ ಮರ್ಲಿನ್ ಮಾರ್ಟಿಸ್ ಡಿಸೋಜ ಹೇಳಿದ್ದಾರೆ.

ಗಾಂ ಹುತಾತ್ಮ ದಿನವಾದ ಇಂದು ನಗರದ ಶಿಕ್ಷಕ-ಶಿಕ್ಷಣ ಅಭ್ಯಾಸಿ ಪ್ರೌಢಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡ ಮಹಿಳಾ ಧ್ವನಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

 ಕೌಟುಂಬಿಕ ದೌರ್ಜನ್ಯದ ಬಗ್ಗೆ ಕುಟುಂಬದ ಹೊರಗೆ ಮಾತನಾಡಬಾರದು ಎಂಬ ಭಾವನೆ ಇದೆ. ಇದರಿಂದ ಕುಟುಂಬದೊಳಗೆ ನಡೆಯುತ್ತಿರುವ ಬಹುತೇಕ ದೌರ್ಜನ್ಯಗಳು ಬೆಳಕಿಗೆ ಬಾರದೆ ಆ ಕುಟುಂಬದ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಹಿಂಸೆಯೊಂದಿಗೆ ಬದುಕುತ್ತಿದ್ದಾರೆ. ಆದ್ದರಿಂದ ಕೌಟುಂಬಿಕ ದೌರ್ಜನ್ಯ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಸೇರಿದ ವಿಷಯವಲ್ಲ. ಈ ದೌರ್ಜನ್ಯದ ಬೇರನ್ನು ಕಿತ್ತು ತೆಗೆಯಬೇಕಿದೆ. ಈ ಪ್ರಕರಣಗಳ ಬಗ್ಗೆ ಕೇವಲ ಅನುಕಂಪ ಸಾಲದು. ನಮ್ಮ ಕುಟುಂಬಗಳಲ್ಲಿ ಮಹಿಳಾ ಸಮಾನತೆ ಇದೆಯೇ?. ಅದಕ್ಕಾಗಿ ನಾವು ಏನು ಮಾಡಬಹುದು ಎಂಬ ಬಗ್ಗೆ ಯೋಚಿಸಿ ಕ್ರೀಯಾಶೀಲರಾಗಬೇಕಿದೆ. ಹೆಣ್ಣು ಮಕ್ಕಳು ಈ ದೌರ್ಜನ್ಯಕ್ಕೊಳಗಾಗದಂತೆ ರಕ್ಷಣೆ ನೀಡುವುದು ಕುಟುಂಬದ ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ಮರ್ಲಿನ್ ತಿಳಿಸಿದರು.

ಕೌಟುಂಬಿಕ ಹಿಂಸೆಗೆ ಒಳಗಾದ ಮಹಿಳೆಯರು ಆ ಹಿಂಸೆಯಿಂದ ಹೊರಬರುವುದು ಅಷ್ಟು ಸುಲಭವಲ್ಲ. ಹೆಣ್ಣು ಸಶಕ್ತಳಾಗುತ್ತಿರುವಂತೆ ಆಕೆಯೊಂದಿಗೆ ಹೊಂದಿಕೊಳ್ಳಲಾಗದೆ ಇರುವ ಸಮಸ್ಯೆ ಕೌಟುಂಬಿಕ ಸಮಸ್ಯೆಗಳಲ್ಲಿದೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳಿಗೆ ತರಬೇತಿ ನೀಡುವಂತೆ ಗಂಡು ಮಕ್ಕಳಿಗೂ ತರಬೇತಿ ನೀಡಬೇಕಿದೆ ಎಂದು ಹಿತಾ ರಿಸೊರ್ಸ್ ಯೂನಿಟ್‌ನ ನಿರ್ದೇಶಕಿ ವಾಣಿ ಪೆರಿಯೋಡಿ ಹೇಳಿದರು.

ಇದೇ ಸಂದರ್ಭ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿ ಬಳಿಕ ಅದನ್ನು ಎದುರಿಸಿ ಹೊರಬಂದು ಸಶಕ್ತಳಾಗಿ ಬದುಕುತ್ತಿರುವ ವಿಕ್ಟೋರಿಯಾ, ಶಾಲಿನಿ, ಭಾರತಿ ತಮ್ಮ ಅನುಭವಗಳನ್ನು ಸಭೆಯ ಮುಂದಿಟ್ಟರು.

ಅಮೃತಾ ಆತ್ರಾಡಿ, ಗುಲಾಬಿ ಬಿಳಿಮಲೆ, ಮಂಜುಳಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News