ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದಿಂದ ಕೃಷ್ಣಾಪುರದಲ್ಲಿ ಬೃಹತ್ ರಕ್ತದಾನ ಶಿಬಿರ

Update: 2017-01-30 18:42 GMT

ಸುರತ್ಕಲ್ , ಜ.30 :  ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಅಲ್-ಹುನೈನ್ ಅಸೋಷಿಯೇಶನ್(ರಿ) ಕೃಷ್ಣಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇವರ ಸಹಯೋಗದೊಂದಿಗೆ ಕೃಷ್ಣಾಪುರದ ಸರಕಾರಿ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು.

ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಮೊಯ್ದಿನ್ ಬಾವ , ರಕ್ತದ ಕೊರತೆಯಿಂದ ಒಂದು ಜೀವವನ್ನು ಬದುಕಿಸುವಂತಹ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯಕ್ರಮ ಶ್ಲಾಘನೀಯ . ಇದೊಂದು ಸ್ವರ್ಗದ ದಾರಿಗೆ ಖಚಿತಪಡಿಸುವ ಉಚಿತ ಸೇವೆಯಾಗಿದೆ. ಮನುಷ್ಯ ಹುಟ್ಟಿದ ನಂತರ ಸಾವು ಖಚಿತ . ಆದರೆ ಅದೆಷ್ಟೋ ಜೀವಗಳು ರಕ್ತದ ಕೊರತೆಯಿಂದ ಸುಂದರ ಜೀವನಕ್ಕೆ ನಾಂದಿ ಹಾಡುತ್ತಿದ್ದಾರೆ. ಇದಕ್ಕೆ ಪೂರಕವಾದ ಕಾರ್ಯಕ್ರಮ ನಡೆಸಲು ನಾವು ಸನ್ನದ್ಧರಾಗಬೇಕಿದೆ. ಶಿಬಿರದಲ್ಲಿ ಇನ್ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು . 123 ಯುನಿಟ್ ರಕ್ತವನ್ನು ಸ್ವೀಕರಿಸಲಾಯಿತು.

ಮಿಸ್ಬಾ ವುಮೆನ್ಸ್ ಕಾಲೇಜು , ಕೃಷ್ಣಾಪುರ ಇದರ ಚೆಯರ್ ಮೆನ್ ಮಮ್ತಾಝ್ ಅಲಿ , ಪಿ.ಎಮ್.ಉಸ್ಮಾನ್ , ಕಾರ್ಪೊರೇಟರ್ ಅಯಾಝ್ , ಅಲ್ ಹುನೈನ್ ಅಸೋಷಿಯೇಶನ್ ಅಧ್ಯಕ್ಷ ಇಫ್ತಿಕಾರ್  ,  ಅಬೂಬಕರ್ ಟಿ.ಎಂ. , ಇಕ್ಬಾಲ್ ಕೆನರಾ, ಬ್ಲಡ್ ಹೆಲ್ಪ್ ಲೈನ್ ಸ್ಥಾಪಕಾಧ್ಯಕ್ಷರಾದ ನಿಸಾರ್ ದಮ್ಮಾಮ್ ಉಳ್ಳಾಲ, ಮುಸ್ತಫಾ ಅಡ್ಡೂರು ದೆಮ್ಮಲೆ, ಶೇಖ್ ಫಯಾಝ್ ಬೈಂದೂರು, ಕೆ.ಎ.ಮೊಹಮ್ಮದ್ ಅಶ್ರಫ್ ಸಖಾಫಿ, ಹಕೀಂ ಪಾಲ್ಕನ್,ಮೊಹಮ್ಮದ್ ಇಸ್ಮಾಯಿಲ್ ಕಬೀರ್ ಚೊಕ್ಕಬೆಟ್ಟು, ಉಸ್ಮಾನ್ ಪ್ಯಾರಡೈಸ್,ಬಶೀರ್ ಕೃಷ್ಣಾಪುರ,ಶಾಫಿ, ಸತ್ತಾರ್ ಹಾಗೂ ಇನ್ನಿತರರು ಶಿಬಿರದಲ್ಲಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News