ದೇವಳದ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರ ಉಪಸ್ಥಿತಿಗೆ ಬಿಜೆಪಿ, ಸಂಘ ಪರಿವಾರ ವಿರೋಧ

Update: 2017-01-31 18:32 GMT

ಬೆಳ್ತಂಗಡಿ, ಜ.31: ಕೊಕ್ಕಡದ ಮಹಾಗಣಪತಿ ದೇವಸ್ಥಾನದಲ್ಲಿ ಸರಕಾರದ ವತಿಯಿಂದ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಸಮಾರಂಭದಲ್ಲಿ ಕೊಕ್ಕಡ ಗ್ರಾಪಂ ಅಧ್ಯಕ್ಷ ವಿ.ಜೆ.ಸೆಬಾಸ್ಟಿಯನ್ ಅವರ ಉಪಸ್ಥಿತಿಯನ್ನು ವಿರೋಸಿ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯ ಕರ್ತರು ಸಭಾಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಘಟನೆ ಮಂಗಳವಾರ ನಡೆದಿದೆ. 

ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಬಳಿಕ ನಡೆದ ಸಭಾಕಾರ್ಯಕ್ರಮದ ಆಮಂತ್ರಣದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅೀನದ ದೇವಳವಾದ ಕಾರಣ ಪ್ರೊಟೋಕಾಲ್ ಪ್ರಕಾರ ಗ್ರಾಪಂನಿಂದ ತೊಡಗಿ ಎಲ್ಲ ಜನಪ್ರತಿನಿಗಳನ್ನೂ ಕಾರ್ಯಕ್ರಮಕ್ಕೆ ಆಮಂತ್ರಿಸಲಾಗಿತ್ತು . ಕೊಕ್ಕಡ ಗ್ರಾಪಂ ಅಧ್ಯಕ್ಷ ಕ್ರಿಶ್ಚಿಯನ್ ಅನ್ನುವ ಕಾರಣಕ್ಕಾಗಿ ಅಭಿವೃದ್ಧಿ ಕಾರ್ಯಕ್ರಮಗಳು ಉದ್ಘಾಟನೆ ನಡೆದು ಸಭೆ ಆರಂಭವಾಗುತ್ತಿದ್ದಂತೆ ವೇದಿಕೆಯಲ್ಲಿದ್ದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣ ಭಟ್ ದತ್ತಿ ಇಲಾಖೆಯ ನಿಯಮಗಳ ಪ್ರಕಾರ ಕಾರ್ಯಕ್ರಮ ನಡೆಯುತ್ತಿಲ್ಲವಾದ್ದರಿಂದ ಸಭೆ ಬಹಿಷ್ಕರಿಸುವುದಾಗಿ ಹೇಳಿ ತಾಪಂ ಸದಸ್ಯ ಲಕ್ಷ್ಮೀ ನಾರಾಯಣ ಟಿ.ಎಂ. ಜೊತೆಗೆ ವೇದಿಕೆಯಿಂದ ಹೊರನಡೆದರು.

ಕೊಕ್ಕಡ ಗ್ರಾಪಂ ಅಧ್ಯಕ್ಷ ವಿ.ಜೆ.ಸೆಬಾಸ್ಟಿಯನ್ ಉಪಸ್ಥಿತಿಗೆ ವಿರೋಧ ಸೂಚಿಸಿ ವೇದಿಕೆ ಮುಂಭಾಗದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರಂಜನ್‌ಗೌಡ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ನೇತೃತ್ವದಲ್ಲಿ ಜಮಾಯಿಸಿದ ನೂರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಪ್ರತಿಭಟನಾ ಸೂಚಕವಾಗಿ ಭಜನೆ ಆರಂಭಿಸಿದರು. ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್. ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಪ್ರಮೀಳಾ ಎಂ.ಕೆ. ಭಜನಾ ನಿರತರೊಂದಿಗೆ ಮಾತುಕತೆ ನಡೆಸಿದರು. ಇದೊಂದು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ ದೇವಾಲಯವಾಗಿರುವುದರಿಂದ ಇಲ್ಲಿನ ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರಕಾರದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲಿಗೆ ಸಂಬಂಸಿದ ಜನಪ್ರತಿನಿಗಳಾದವರೆಲ್ಲರನ್ನೂ ಆಹ್ವಾನಿಸಲಾಗಿದೆ. ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮ ಮೂಡಪ್ಪ ಸೇವೆ ಸಂಜೆ ನಡೆಯಲಿದ್ದು, ಈಗ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯ ಸಭಾ ಕಾರ್ಯಕ್ರಮವಾಗಿದೆ ಎಂದರು.

ಇದನ್ನು ಒಪ್ಪದ ಪ್ರತಿಭಟನಾಕಾರರು ಸರಕಾರದ ಕಾರ್ಯಕ್ರಮವಾಗಿದ್ದಲ್ಲಿ ಕರ್ನಾಟಕ ಸರಕಾರದ ಹೆಸರು ಮತ್ತು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭವೆಂದು ಮಾತ್ರ ಹೆಸರು ಹಾಕಿ ಸಭೆ ನಡೆಸಿದ್ದಲ್ಲಿ ನಮ್ಮ ಅಭ್ಯಂತರವಿಲ್ಲ. ಇದೇ ವೇದಿಕೆಯಲ್ಲಿ ಸಭೆ ನಡೆಸುವುದಾದಲಿ ವೇದಿಕೆಯಲ್ಲಿ ಹಾಕಲಾಗಿರುವ ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್ ಬದಲಿಸಿ ಕಾರ್ಯಕ್ರಮ ನಡೆಸಿ ಎಂದು ಪಟ್ಟು ಹಿಡಿದರು.

ಇದಕ್ಕೆ ಮುಜರಾಯಿ ಇಲಾಖೆ ಅಕಾರಿಗಳು ಒಪ್ಪದಿದ್ದಾಗ ಭಜನೆ ಮತ್ತೆ ಮುಂದುವರಿಯಿತು. ಈ ಸಂದರ್ಭ ಪೊಲೀಸರು ಕಾರ್ಯಕ್ರಮ ವಿರೋಸಿ ಭಜನೆ ಮಾಡುತ್ತಿದ್ದ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ಸ್ಥಳದಿಂದ ತೆರವುಗೊಳಿಸಿದರು. ಬಳಿಕ ಸಭಾ ಕಾರ್ಯಕ್ರಮ ಮುಂದುವರಿಯಿತು.

ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಧರ್ಮಸ್ಥಳ ಠಾಣೆ ಎಸ್ಸೆ ಮಾಧವ ಕೂಡ್ಲು, ಪೂಂಜಾಲಕಟ್ಟೆ ಎಸ್ಸೆ ಚಂದ್ರಶೇಖರ, ವೇಣೂರು ಎಸ್ಸೆ ಲೋಲಾಕ್ಷರ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರತಿಭಟನೆಯ ನಡುವೆಯೇ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೆ.ವಸಂತ ಬಂಗೇರ, ಬಯಲು ಆಲಯದ ಗಣಪನ ಈ ಕ್ಷೇತ್ರದಲ್ಲಿ ಭಕ್ತರ ಅನುಕೂಲಕ್ಕಾಗಿ ಸರಕಾರದಿಂದ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಇಂದು ಲೋಕಾರ್ಪಣೆ ಮಾಡಲು ಸಂತಸವಾಗುತ್ತಿದೆ ಎಂದರು. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮ ದಾಯ ದತ್ತಿಗಳ ಇಲಾಖಾ ಸಹಾಯಕ ಆಯುಕ್ತೆ ಪ್ರಮೀಳಾ ಎಂ.ಕೆ. ಮಾತನಾಡಿ, ಧಾರ್ಮಿಕ ಕ್ಷೇತ್ರಗಳಿಗೆ ಒಳ್ಳೆಯ ಭಾವನೆಯಲ್ಲಿ ಬರುವ ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಕ್ಷೇತ್ರದ ಆಡಳಿತಕ್ಕಿದೆ. ಯಾವುದೇ ಧರ್ಮಗಳು ಸಂಕುಚಿತ ಭಾವನೆಯನ್ನು ಹೊಂದುವುದನ್ನು ಹೇಳುವುದಿಲ್ಲ.

ಇದೇ ಸಂದರ್ಭ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಶುಭಹಾರೈಸಿದರು. ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಕುಡ್ತಲಾಜೆ ಗೋಪಾಲಕೃಷ್ಣ ಭಟ್‌ರನ್ನು ದೇವಸ್ಥಾನದ ಪರವಾಗಿ ಶಾಸಕ ವಸಂತ ಬಂಗೇರ ಸನ್ಮಾನಿಸಿದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುಕುಂದ ಸುವರ್ಣ, ಕೊಕ್ಕಡ ಗ್ರಾಪಂ ಅಧ್ಯಕ್ಷ ವಿ.ಜೆ.ಸೆಬಾಸ್ಟಿಯನ್, ಇಒ ಹರಿಶ್ಚಂದ್ರ ಉಪಸ್ಥಿತರಿದ್ದರು. ನೂತನ ಭೋಜನ ಶಾಲೆ, ನೂತನ ಅತಿಥಿಗೃಹ, ಭದ್ರತಾ ಕೊಠಡಿ, ಬಯಲುರಂಗಮಂದಿರ, ಪ್ರಸಾದ ವಿತರಣಾ ಕೊಠಡಿ ಮುಂತಾದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನಡೆಯಿತು.

ಆಡಳಿತಾಕಾರಿ ತಾರಕೇಸರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ರಹ್ಮಣ್ಯ ಶಬರಾಯ ವಂದಿಸಿದರು. ಹರ್ಷಿತ್ ಪಡ್ರೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News