×
Ad

ಕೇರಳ: ಹಜ್ ಡ್ರಾ ದಿನಾಂಕ ಮುಂದೂಡಿಕೆ

Update: 2017-02-01 13:10 IST

ಕೊಂಡೊಟ್ಟಿ,ಫೆ. 1: ಈವರ್ಷದ ಹಜ್ ಚೀಟಿ ಎತ್ತುವ ಪ್ರಕ್ರಿಯೆಯನ್ನು ಮಾರ್ಚ್ 14ರಿಂದ 21ರವರೆಗೆ ಮುಂದೂಡಲಾಗಿದೆ. ಈ ಹಿಂದೆ ಮಾರ್ಚ್ ಒಂದರಿಂದ ಆರವರೆಗೆ ಡ್ರಾ ದಿನಾಂಕ ಗೊತ್ತು ಪಡಿಸಲಾಗಿತ್ತು.

ಹಜ್ ಯಾತ್ರೆ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸುವ ದಿನಾಂಕ ಮುಂದೂಡಿದ ಕಾರಣ ಹಜ್ ಯಾತ್ರೆ ಫಲಾನುಭವಿಗಳ ಆಯ್ಕೆಯ ಪ್ರಕ್ರಿಯೆಯನ್ನು ಕೂಡಾ ಮುಂದೂಡಲಾಗಿದೆ. ಆಯ್ಕೆಯಾದವರು ಎಪ್ರಿಲ್ ಐದಕ್ಕೆ ಪ್ರಥಮ ಹಂತದ 81,000ರೂಪಾಯಿಯನ್ನು ಪಾವತಿಸಬೇಕು. ಇದರ ದಿನಾಂಕ ಈ ಹಿಂದೆ ಮಾರ್ಚ್ 22ಆಗಿತ್ತು. ಹಜ್ ತರಬೇತಿಗೆ ಮುಂಬೈಯಲ್ಲಿ ಎಪ್ರಿಲ್ 10ರಿಂದ 12ರವರೆಗೆ ನಿಶ್ಚಯಿಸಿದ್ದ ತರಬೇತಿ ಶಿಬಿರ ಎಪ್ರಿಲ್ 21ರಿಂದ 23ರವರೆಗೆ ಮುಂದೂಡಿ ಹೊಸ ಸುತ್ತೋಲೆ ಹೊರಡಿಸಲಾಗಿದೆ. ಹಜ್‌ಯಾತ್ರೆಗೆ ಅವಕಾಶ ಸಿಕ್ಕಿದವರು ಮಾರ್ಚ್31ರೊಳಗೆ ಮೆಡಿಕಲ್ ಸರ್ಟಿಫಿಕೇಟ್ ಸಲ್ಲಿಸಬೇಕು ಮತ್ತು ಮೊದಲ ಹಂತದ ಹಣ ಪಾವತಿಸಿದ ಪೇ ಇನ್ ಸ್ಲಿಪ್‌ನ್ನು ಎಪ್ರಿಲ್ 31ಕ್ಕಿಂತ ಮೊದಲು ಸಲ್ಲಿಸಬೇಕೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News