ಸೆರೆಸಿಕ್ಕದ ಕಳ್ಳನ ಮದುವೆಯಲ್ಲಿ ಕುಪ್ರಸಿದ್ಧ ಕಳ್ಳರ ಸಂಗಮ!

Update: 2017-02-01 12:24 GMT

ಮುಂಬೈ,ಫೆ.1: ಮಹಾರಾಷ್ಟ್ರದ ಥಾಣೆಯಲ್ಲಿ ಅಸಾಧಾರಣ ಮದುವೆಯೊಂದು ನಡೆದಿದೆ. ವರನಂತೆ ಮದುವೆಗೆ ಬಂದವರು ಕೂಡಾ ಅಸಾಧಾರಣ ವ್ಯಕ್ತಿಗಳಾಗಿದ್ದರು.ಪೊಲೀಸರಿಂದ ತಪ್ಪಿಸಿ ತಿರುಗಾಡುತ್ತಿದ್ದ ಸರಕಳ್ಳನ ವಿವಾಹಕ್ಕೆ ಆಮಂತ್ರಿತರು ದೇಶದ ವಿವಿಧ ಕಡೆಗಳ ಹೈಟೆಕ್ ಕಳ್ಳರು ಹಾಗೂ ಸರಕಳ್ಳರಾಗಿದ್ದರು. ಹಾಗಿದ್ದೂ ಕಳ್ಳರನ್ನು ಪೊಲೀಸರಿಂದ ಬಂಧಿಸಲು ಸಾಧ್ಯವಾಗಿಲ್ಲ.

25ಕ್ಕೂ ಹೆಚ್ಚು ಸರಕಳ್ಳತನ ಆರೋಪಿ ತೌಫೀಕ್ ತೇಜ್ ಶಾನ ವಿವಾಹ ಔತಣದಲ್ಲಿ ಕನಿಷ್ಠ ಆರುಮಂದಿ ಕಳ್ಳತನದ ಆರೋಪಿಗಳು ಭಾಗವಹಿಸಿದ್ದರು. ಅತ್ತೆ ಮಗಳು ಝೊಹ್ರಾ ಇರಾನಿಯನ್ನು ಆತ ವಿವಾಹವಾಗಿದ್ದಾನೆ. ವಧುವಿಗೆ ಕೇವಲ ಹದಿನೈದು ವರ್ಷ ವಯಸ್ಸು. ಆದರೆ ಪೊಲೀಸರ ಕಣ್ಣಮುಂದೆಯೇ ಯಾವುದೇ ಅಡ್ಡಿಯಿಲ್ಲದೆ ಅಪ್ರಾಪ್ತ ವಯಸ್ಸಿನ ತೇಜ್ ಶಾಳನ್ನು ಮದುವೆಯಾಗಿದ್ದಾನೆ. ಅವರಿಬ್ಬರು ನಿರ್ವಿಘ್ನವಾಗಿ ಸತಿಪತಿಗಳಾಗಿದ್ದಾರೆ. ಮದುವೆಯಲ್ಲಿ ಸೇರಿದ್ದವರಲ್ಲಿ ಹೆಚ್ಚಿನವರು ಕಳ್ಳಕಾಕರೇ ಆಗಿದ್ದರೂ ಇಪ್ಪತ್ತು ಪೊಲೀಸರ ಮುಂದೆ ವಿವಾಹ ಸಮಾರಂಭ ಸಾಂಗವಾಗಿ ನೆರವೇರಿತು. ಪೊಲೀಸರು ಯಾರನ್ನೂ ಬಂಧಿಸಿಲ್ಲ.

ಸರಕಳ್ಳತನ ಆರೋಪದಲ್ಲಿ 2012ರಲ್ಲಿ ಪೊಲೀರು ತೇಜ್‌ಶಾನನ್ನು ಸೆರೆಹಿಡಿದ್ದರು. ಅಂದು ಆತನಿಂದ ಚಿನ್ನದ ಸರಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜಾಮೀನಿನಲ್ಲಿ ಹೊರಬಂದ ತೇಜ್ ಶಾ ಮತ್ತೆ ಹಳೇ ಚಾಳಿ ಮುಂದುವರಿಸಿದ್ದ. 2016ರಲ್ಲಿ ಆತನ ವಿರುದ್ಧ ಪುನಃ ಕೇಸುದಾಖಲಾಗಿತ್ತು.ಆದರೆ ಈವರೆಗೂ ಆತನನ್ನು ಪೊಲೀಸರಿಂದ ಬಂಧಿಸಲು ಆಗಿರಲಿಲ್ಲ.

ತೇಜ್‌ಶಾನ ವಿವಾಹ ನಡೆಯುತ್ತಿದೆ ಎಂಬ ಗುಪ್ತಮಾಹಿತಿಯಂತೆ ಅವರನ್ನು ಬಂಧಿಸಿ ತರಲು 20 ಪೊಲೀಸರನ್ನು ನೇಮಕಗೊಳಿಸಲಾಗಿತ್ತು. ಆದರೆ ಅವರು ಯಾಕೆ ಬಂಧಿಸಿಲ್ಲ ಎಂದು ಥಾಣೆ ಪೊಲೀಸ್ ಮೇಲಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಇನ್ಸ್‌ಪೆಕ್ಟರ್ ರವೀಂದ್ರ ಡಾಪ್ಟೆ ನೇತೃತ್ವದಲ್ಲಿ ವಿವಾಹದ ಮೇಲೆ ನಿಗಾಇರಿಸಲಾಗಿತ್ತು. ಪೊಲೀಸರಿಗೆ ವಿವಾಹದ ಮೇಲೆ ನಿಗಾವಿರಿಸಲು ಮಾತ್ರ ಆದೇಶ ಇತ್ತು ಎಂದು ಇನ್ಸ್‌ಪೆಕ್ಟರ್ ಡಾಪ್ಟೆ ಹೇಳುತ್ತಿದ್ದಾರೆ. ಆರೋಪಿಯನ್ನು ಬಂಧಿಸಿದರೆ ಕೋಲಾಹಲವಾಗಬಹುದೆಂದು ಆತನನ್ನು ಬಂಧಿಸಿಲ್ಲ ಎಂದು ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ. ಮಕ್ಕಳು ಮತ್ತು ಮಹಿಳೆಯರನ್ನು ಮುಂದಿಟ್ಟು ಕಳ್ಳರ ಕೂಟ ಆಕ್ರಮಿಸಬಹುದೆಂದು ಪೊಲೀಸರಿಗೆ ಹೆದರಿಕೆಯಿತ್ತು ಎನ್ನಲಾಗುತ್ತಿದೆ.

ಕರ್ನಾಟಕ, ಮುಂಬೈ, ದಿಲ್ಲಿ, ಭೋಪಾಲ್‌ನಿಂದಲೂಸರಕಳ್ಳನ ವಿವಾಹಕ್ಕೆ ಅವನಂತಹದೇ ಕಳ್ಳರು ಆಗಮಿಸಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News