×
Ad

ಅಂಡರ್-19 ಏಕದಿನ ಸರಣಿ: ಇಂಗ್ಲೆಂಡ್ ವಿರುದ್ಧ ಭಾರತ ಜಯಭೇರಿ

Update: 2017-02-01 23:37 IST

ಮುಂಬೈ,ಫೆ.1: ಹಾರ್ವಿಕ್ ದೇಸಾಯಿ(75 ರನ್) ಹಾಗೂ ಹಿಮಾಂಶು ರಾಣಾ(58) ಆಕರ್ಷಕ ಅರ್ಧಶತಕ, ಅನುಕುಲ್ ರಾಯ್(3-34) ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಭಾರತದ ಅಂಡರ್-19 ತಂಡ ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ ಯೂತ್ ಏಕದಿನ ಸರಣಿಯ 2ನೆ ಪಂದ್ಯದಲ್ಲಿ 129 ರನ್‌ಗಳ ಅಂತರದಿಂದ ಜಯ ಸಾಧಿಸಿದೆ.

ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 287 ರನ್ ಗಳಿಸಿತು. ದೇಸಾಯಿ(75ರನ್, 62 ಎಸೆತ, 10 ಬೌಂಡರಿ) ಹಾಗೂ ರಾಣಾ(58ರನ್, 66 ಎಸೆತ, 10 ಬೌಂಡರಿ), ಶಿವ ಸಿಂಗ್(12 ಎಸೆತ, 23 ರನ್)ಕೊಡುಗೆ ನೆರವಿನಿಂದ ಉತ್ತಮ ಸ್ಕೋರ್ ದಾಖಲಿಸಿತು.

ಇಂಗ್ಲೆಂಡ್‌ನ ಪರ ಫಿಶರ್(4-44)ಹಾಗೂ ಬ್ರೂಕ್ಸ್(3-60) ಏಳು ವಿಕೆಟ್ ಹಂಚಿಕೊಂಡರು.

ಗೆಲ್ಲಲು ಕಠಿಣ ಸವಾಲು ಪಡೆದ ಇಂಗ್ಲೆಂಡ್ ತಂಡ ಭಾರತದ ಸಂಘಟಿತ ದಾಳಿಗೆ ಸಿಲುಕಿ 33.4 ಓವರ್‌ಗಳಲ್ಲಿ 158 ರನ್‌ಗೆ ಆಲೌಟಾಯಿತು. ರಾಲಿನ್ಸ್ (46)ಸರ್ವಾಧಿಕ ಸ್ಕೋರ್ ಬಾರಿಸಿದರು. ಬ್ರೂಕ್ಸ್(26), ಪೋಪ್(24)ಎರಡಂಕೆಯ ಸ್ಕೋರ್ ದಾಖಲಿಸಿದರು. ಭಾರತದ ಪರ ಅನುಕೂಲ್ ರಾಯ್(3-34)ಯಶಸ್ವಿ ಬೌಲರ್ ಎನಿಸಿಕೊಂಡರೆ, ಶಿವಂ ಮಾವಿ(2-13), ಪೊರೆಲ್(2-33) ತಲಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News