ಆಳ್ವಾಸ್‌ನಲ್ಲಿ ಆರ್ಮ್ ಪ್ರೊಸೆಸರ್ ಕಾರ್ಯಾಗಾರ

Update: 2017-02-02 11:54 GMT

ಮೂಡುಬಿದಿರೆ , ಫೆ. 2 : ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಆರ್ಮ್ ಪ್ರೊಸೆಸರ್ ಮತ್ತು ಕೀಲ್’’ ಸಾಫ್ಟ್ ವೇರ್ ಬಗ್ಗೆ ಎರಡು ದಿನಗಳ ಕಾರ್ಯಗಾರ ನಡೆಯಿತು.

ಕಾರ್ಯಾಗಾರವನ್ನು ದಾವಣಗೆರೆ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಮತ್ತು ವಿಟಿಯು ಪಠ್ಯ ಪರಿಷ್ಕರಣ ಸಮಿತಿಯ ಸದಸ್ಯ ಡಾ.ಶ್ರೀಧರ್ ಕೆ.ಎಸ್ ಉದ್ಘಾಟಿಸಿ, ಮೊಬೈಲ್ ಮತ್ತು ಕಂಪ್ಯೂಟರ್‌ಗಳಲ್ಲಿ ಪ್ರೊಸೆಸರ್ ಬಳಕೆ ಕುರಿತು ವಿವರಿಸಿದರು.

ಬಿಎಮ್‌ಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಹರೀಶ್ ಮೆಕಲಿ ಮತ್ತು ಚಿಪ್ ಮ್ಯಾಕ್ಸ್ ಗ್ರೂಪ್‌ನ ವೇಣು ಮತ್ತು ತಂಡದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

 ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫರ್ನಾಂಡಿಸ್, ಸಂಯೋಜಕ ಡಾ. ದತ್ತಾತ್ರೇಯ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ರಾಜ್ಯದ ಸುಮಾರು 30ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಜಯಂತ್ ಕುಮಾರ್ ರಾಥೋಡ್ ಸ್ವಾಗತಿಸಿದರು.

ಪ್ರೊಫೆಸರ್ ಸಂತೋಷ್ ಅತಿಥಿಗಳನ್ನು ಪರಿಚಯಿಸಿದರು.

ಪ್ರೊಫೆಸರ್ ದಿವ್ಯಾ ರವಿ ಕಾರ್ಯಕ್ರಮ ನಿರೂಪಿಸಿದರು.

ಪ್ರೊಫೆಸರ್ ಸುದರ್ಶನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News