ಇಂದು ಔಷಧ ಮಾರಾಟ ಪ್ರತಿನಿಧಿಗಳಿಂದ ಮುಷ್ಕರ

Update: 2017-02-02 18:35 GMT

ಉಡುಪಿ, ಫೆ.2: ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘಟನೆ ನಾಳೆ ಉಡುಪಿ ಜಿಲ್ಲಾ ಘಟಕದ ವತಿಯಿಂದಲೂ ಒಂದು ದಿನದ ಮುಷ್ಕರ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಔಷಧ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳಕ್ಕೆ ಕೇಂದ್ರ ಸರಕಾರ ಪ್ರಾತಿನಿಧ್ಯ ಕೊಟ್ಟು ಔಷಧ ಕ್ಷೇತ್ರದಲ್ಲಿ ನಮ್ಮ ದೇಶದ ಸ್ವಾಯತ್ತೆಯನ್ನು ಇಲ್ಲದಂತೆ ಮಾಡಿದೆ. ಮೂತ್ರ ಪಿಂಡ, ಹೃದಯ, ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳ ಹಾಗೂ ಕ್ಯಾನ್ಸರ್ ಮತ್ತು ಸಕ್ಕರೆ ಕಾಯಿಲೆಗೆ ಬೇಕಾಗಿರುವ ಔಷಧಗಳಿಗೆ ಹೆಚ್ಚು ಬೆಲೆಯ ಪೇಟೆಂಟ್ ಇರುವ ಔಷಧಗಳ ಮೇಲೆ ಅವಲಂಬಿಸುವ ಪರಿಸ್ಥಿತಿಯನ್ನು ಕೇಂದ್ರ ಸರಕಾರ ನಿರ್ಮಾಣ ಮಾಡುತ್ತಿದೆ ಎಂದು ಅದು ಆರೋಪಿಸಿದೆ.

ಇದನ್ನು ವಿರೋಧಿಸಿ ಅಖಿಲ ಭಾರತ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘಟನೆಯು ನಾಳೆ ದೇಶಾದ್ಯಂತ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದೆ ಎಂದು ಪ್ರಕಟನೆ ತಿಳಿಸಿದೆ.

ಬೇಡಿಕೆಗಳು: ಎಲ್ಲಾ ಔಷಧ ಹಾಗೂ ವೈದ್ಯಕೀಯ ಸಾಧನಗಳ ಬೆಲೆಯು ಉತ್ಪಾದನಾ ವೆಚ್ಚದ ಮೇಲೆ ನಿಗದಿಯಾಬೇಕು. ಅವುಗಳ ಮೇಲಿನ ಎಲ್ಲಾ ತೆರಿಗೆಗಳನ್ನು ತೆಗೆದು ಹಾಕಬೇಕು. ಔಷಧಗಳು ಮತ್ತು ವೈದ್ಯಕೀಯ ಸಾಧನಗಳ ಮೇಲೆ ಸರಕು ಸೇವಾ ತೆರಿಗೆಯನ್ನು ವಿಧಿಸಬಾ ರದು. ಆನ್‌ಲೈನ್ ಔಷಧ ವ್ಯಾಪಾರಕ್ಕೆ ಅವಕಾಶ ನೀಡದೆ, ಔಷಧ ಗಳನ್ನು ಹಾಗೂ ಲಸಿಕಾ ಉತ್ಪಾದನೆ ಮಾಡುತ್ತಿರುವ ಸಾರ್ವಜನಿಕ ಉದ್ದಿಮೆಗಳನ್ನು ಉಳಿಸಲು ಬೇಡಿಕೆ ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News