ವ್ಯಕ್ತಿ ಅಳುತ್ತಿದ್ದರೆ ಮೂಗಿನಿಂದ ನೀರು ಸುರಿಯುವುದೇಕೆ..?

Update: 2017-02-04 08:29 GMT

ಇದು ಎಲ್ಲರ ಅನುಭವಕ್ಕೆ ಬಂದಿರುವುದೇ. ಆತ/ಆಕೆ ಅಳುತ್ತಿದ್ದರೆ ಮೂಗಿನಿಂದ ದ್ರವ ಒಸರುತ್ತಿರುತ್ತದೆ. ನೇಸಲಾಕ್ರಿಮಲ್ ಡಕ್ಟ್ ಎಂದು ಕರೆಯಲಾಗುವ ನಾಳದ ಮೂಲಕ ಕಣ್ಣು ಮತ್ತು ಮೂಗಿನ ನಡುವಿನ ಸಂವಹನ ಇದಕ್ಕೆ ಕಾರಣ.

ಕಣ್ಣೀರು ಲಾಕ್ರಿಮಲ್ ಗ್ರಂಥಿಯಲ್ಲಿ ಉತ್ಪತ್ತಿಯಾಗುತ್ತದೆ ಮತ್ತು ಹಲವಾರು ನಾಳಗಳ ಮೂಲಕ ಕಣ್ಣುಗುಡ್ಡೆಯ ಮುಂಭಾಗದ ಮೇಲ್ಮೈ ಅನ್ನು ತಲುಪುತ್ತದೆ.

ಹೆಚ್ಚಿನ ಕಣ್ಣೀರು ಆವಿಯಾಗುತ್ತದೆ,ಆದರೆ ಹೆಚ್ಚುವರಿ ಕಣ್ಣೀರು ಲಾಕ್ರಿಮಲ್ ಪಂಕ್ಟಾ ಮೂಲಕ ಲಾಕ್ರಿಮಲ್ ಕೆನಾಲಿಕ್ಯುಲಿಯನ್ನು ಪ್ರವೇಶಿಸಲು ಕಣ್ಣಿನ ಮೂಲೆಯಲ್ಲಿ ಸಂಗ್ರಹವಾಗುತ್ತದೆ.

ಲಾಕ್ರಿಮಲ್ ಕೆನಾಲಿಕ್ಯುಲಿ ಲಾಕ್ರಿಮಲ್ ಸ್ಯಾಕ್‌ನೊಳಗೆ ತೆರೆದುಕೊಳ್ಳುತ್ತದೆ ಮತ್ತು ನೇಸಲಾಕ್ರಿಮಲ್ ನಾಳದೊಳಗೆ ಹರಿಯುತ್ತದೆ. ಈ ನಾಳ ಮೂಗಿನ ಹೊರಳೆಗಳಲ್ಲಿ ತೆರೆದುಕೊಳ್ಳುತ್ತದೆ.

ಅಳು ಹೆಚ್ಚಿನ ಕಣ್ಣೀರನ್ನು ಉತ್ಪತ್ತಿ ಮಾಡುತ್ತದೆ. ಇದುಮೂಗಿನ ಹೊಳ್ಳೆಗಳ ಮೂಲಕ ಹರಿಯುತ್ತದೆ ಮತ್ತು ಮೂಗು ಒದ್ದೆಯಾಗಲು ಕಾರಣವಾಗುತ್ತದೆ.ಹೆಚ್ಚಿನ ಕಣ್ಣೀರು ಕಣ್ಣುಗುಡ್ಡೆಯ ತಳಭಾಗದಿಂದ ಹೊರಗೆ ದಬ್ಬಲ್ಪಟ್ಟು ಕೆನ್ನೆಗಳ ಮೇಲೆ ಹರಿಯುತ್ತದೆ.

ಮಾಹಿತಿ : MARS Learning Centre, Mangalore. Ph: 9845563943

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News