ವಿಜಯ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ

Update: 2017-10-03 19:32 GMT

ಮಂಗಳೂರು, ಫೆ.3: ದ.ಕ. ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ವಿಜಯ ಬ್ಯಾಂಕ್‌ನ 82 ಶಾಖೆಗಳು ಮತ್ತು 7 ಇತರ ಕಚೇರಿಗಳನ್ನೊಳಗೊಂಡ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸುಧಾಕರ ನಾಯಕ್ ಎ. ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಮುಂಬೈನ ಪ್ರಾದೇಶಿಕ ಕಚೇರಿಯ ಉಪಮಹಾ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದ ಇವರು ತನ್ನ ಸೇವಾವಯಲ್ಲಿ ಜರ್ಮನಿಯ  ಸ್ಕೂಲ್ ಆಫ್ ಫೈನಾನ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ತರಬೇತಿ ಪಡೆದಿದ್ದರು.

ಕೆನರಾ ಕಾಲೇಜಿನಲ್ಲಿ ವಾಣಿಜ್ಯ ಪದವೀಧರರಾಗಿದ್ದ ಇವರು ಕರ್ನಾಟಕ ವಿವಿಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕಾನೂನು ಪದವಿ ಪಡೆದಿದ್ದು, ವಾಣಿಜ್ಯ ಪದವಿಯಲ್ಲಿ ಮಂಗಳೂರು ವಿವಿಗೆ ಪ್ರಥಮ ರ್ಯಾಂಕ್ ಗಳಿಸಿದ್ದರು. 1984ರಲ್ಲಿ ವಿಜಯ ಬ್ಯಾಂಕ್‌ನಲ್ಲಿ ಸೇವೆಯನ್ನು ಆರಂಭಿಸಿದ ಇವರು ಬೆಳಗಾವಿ, ಬಿಜಾಪುರ, ಮಂಗಳೂರು, ಹುಬ್ಬಳ್ಳಿ, ಹೊಸದಿಲ್ಲಿ, ಬೆಂಗಳೂರು, ಲಕ್ನೋ, ರೀದಾಬಾದ್, ಸೂರತ್, ಮುಂಬೈಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News