ಉಡುಪಿ: ಚಲನಚಿತ್ರ ಸಪ್ತಾಹಕ್ಕೆ ಚಾಲನೆ

Update: 2017-02-03 18:53 GMT

 ಉಡುಪಿ, ೆ.3: ಸದಭಿರುಚಿ ಚಿತ್ರಗಳಿಂದ ಜನರಿಗೆ ಮನರಂಜನೆಯ ಜೊತೆಜೊತೆಗೆ ಉತ್ತಮ ಸಂದೇಶ ನೀಡಲು ಸಾಧ್ಯವಿದೆ ಎಂದು ಉಡುಪಿ ಅಪರ ಜಿಲ್ಲಾಕಾರಿ ಅನುರಾಧಾ ಹೇಳಿದ್ದಾರೆ.

ಶುಕ್ರವಾರ ಡಯಾನಾ ಚಿತ್ರಮಂದಿರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾದ ಚಲನಚಿತ್ರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸದಭಿರುಚಿ, ಸಮಾಜಮುಖಿ ಚಿತ್ರಗಳನ್ನು ಸಮಾಜದ ಅಭಿವೃದ್ಧಿಯ ದೃಷ್ಟಿಯಿಂದ ಸಾರ್ವಜನಿಕರು ವೀಕ್ಷಿಸಿ ಪ್ರೋತ್ಸಾಹಿಸಬೇಕು. ಚಲನಚಿತ್ರಗಳಿಂದ ಮನೋರಂಜನೆ, ಕಲಿಕೆ ಸಾಧ್ಯವಿದೆ. ಆದ್ದರಿಂದ ಉತ್ತಮ ಚಿತ್ರಗಳ ನಿರ್ಮಾಣ ಹೆಚ್ಚಾಗಬೇಕು. ಕನ್ನಡ ಚಲನಚಿತ್ರಗಳಿಗೆ ಸರಕಾರ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದೆ ಎಂದರು.

ಡಯಾನಾ ಥಿಯೇಟರ್ ಮಾಲಕ ಸುಲಕ್ಷಣ ಪೈ, ಅಲಂಕಾರ್ ಥಿಯೇಟರ್ ವ್ಯವಸ್ಥಾಪಕ ಜಗದೀಶ್ ಕುಡ್ವ, ಡಯಾನಾ ಥಿಯೇಟರ್ ವ್ಯವಸ್ಥಾಪಕ ಸುಗಂಧರ್ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಕಾರಿ ರೋಹಿಣಿ ಸ್ವಾಗತಿಸಿದರು. ಪ್ರಕಾಶ್ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

*ಶುಕ್ರವಾರದಿಂದ ಆರಂಭಗೊಂಡ ಚಲನಚಿತ್ರೋತ್ಸವ ಸಪ್ತಾಹದಲ್ಲಿ ಪ್ರತೀದಿನ ಬೆಳಗ್ಗೆ 10ಕ್ಕೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರಗಳ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News