156 ಸರಕಾರಿ ಬ್ಯಾಂಕ್ ಅಧಿಕಾರಿಗಳ ಅಮಾನತು
ಹೊಸದಲ್ಲಿ, ಫೆ.4: ನೋಟು ಅಮಾನ್ಯದ ಬಳಿಕ ನಡೆಸಲಾಗಿರುವ ಅಕ್ರಮದಲ್ಲಿ ಕೆಲವು ನಿರ್ದಿಷ್ಟ ಬ್ಯಾಂಕ್ ಅಧಿಕಾರಿಗಳು ಭಾಗಿಯಾಗಿದ್ದು, ಮೇಲ್ನೋಟಕ್ಕೆ ಅವ್ಯವಹಾರದಲ್ಲಿ ಭಾಗಿಯಾದ ಆರೋಪದಲ್ಲಿ ಸಾರ್ವಜನಿಕ ವಲಯ ಬ್ಯಾಂಕ್‌ನ (ಪಿಎಸ್‌ಬಿ)156 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, 41 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಲೋಕಸಭೆಗೆ ತಿಳಿಸಿದ್ದಾರೆ.
ಕ್ರಿಮಿನಲ್ ಪ್ರಕರಣಗಳು ಕಂಡು ಬಂದ ಕಡೆಗಳಲ್ಲಿ ಬ್ಯಾಂಕ್‌ಗಳು ಕೂಡ ಪೊಲೀಸ್ ಠಾಣೆ ಹಾಗೂ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಗಳಲ್ಲಿ 26 ಪ್ರಕರಣಗಳನ್ನು ದಾಖಲಿಸಿದೆ ಎಂದು ಜೇಟ್ಲಿ ತಿಳಿಸಿದರು.
‘‘ನೋಟು ಅಮಾನ್ಯಗೊಂಡ ಸಂದರ್ಭದಲ್ಲಿ ನಿರ್ದಿಷ್ಟ ಬ್ಯಾಂಕ್ ನೋಟು(ಎಸ್‌ಬಿಎನ್)ಗಳ ‘ಅನಿಯಮಿತ ವಿನಿಮಯದ ವ್ಯವಹಾರ’ದಲ್ಲಿ ಬ್ಯಾಂಕ್ ಉದ್ಯೋಗಿಗಳು ಭಾಗಿಯಾಗಿದ್ದು ಕಂಡುಬಂದಿದ್ದು, 11 ಉದ್ಯೋಗಿಗಳನ್ನು ಅಮಾನತುಗೊಳಿಸಲಾಗಿದೆ. ಬ್ಯಾಂಕ್‌ಗಳು ಕೂಡ ಆಂತರಿಕ ತನಿಖೆಯ ಕ್ರಮಕೈಗೊಂಡಿದ್ದು, ಪೊಲೀಸರು ಹಾಗೂ ಸಿಬಿಐನಲ್ಲಿ ಪ್ರಕರಣವನ್ನು ದಾಖಲಿಸಿವೆ ಎಂದು ರಿಸರ್ವ್ ಬ್ಯಾಂಕ್(ಆರ್‌ಬಿಐ) ಮಾಹಿತಿ ನೀಡಿದೆ'' ಎಂದು ವಿತ್ತ ಸಚಿವರು ತಿಳಿಸಿದರು.