ಬಿಸಿ ಬಿಸಿ ಕಾಫಿ ಬಾಯಿಯನ್ನೇಕೆ ಸುಡುವುದಿಲ್ಲ..?

Update: 2017-02-04 14:20 GMT

ಅಪ್ಪಿತಪ್ಪಿ ಮೈಮೇಲೆ ಬಿದ್ದರೆ ಚರ್ಮವನ್ನು ಸುಡುವ ಬಿಸಿಬಿಸಿ ಕಾಫಿಯನ್ನು ಯಾವುದೇ ತೊಂದರೆಯಿಲ್ಲದೆ ಆರಾಮವಾಗಿ ಸೇವಿಸುತ್ತೇವಲ್ಲ....ಹೇಗೆ?

ಬಾಯಿ ಸುಡುವ ಅಪಾಯ ನಾವು ಸೇವಿಸುವ ಆಹಾರದ ಉಷ್ಣತೆಯನ್ನು ಅವಲಂಬಿಸಿರುತ್ತದೆ, ಆದರೆ ಅದು ನಾವು ಬಾಯಿಯಲ್ಲಿ ಇಟ್ಟುಕೊಳ್ಳುವ ಆಹಾರದ ಪ್ರಮಾಣವನ್ನೂ ಅವಲಂಬಿಸಿರುತ್ತದೆ. ಆಹಾರವು ಉಷ್ಣ ಶಕ್ತಿಯನ್ನು ಹೇಗೆ ನಮ್ಮ ಬಾಯಿಗೆ ವರ್ಗಾಯಿಸುತ್ತದೆ ಮತ್ತು ಎಷ್ಟು ಸಮಯ ಆಹಾರ ನಮ್ಮ ಬಾಯಿಯ ಸಂಪರ್ಕದಲ್ಲಿರುತ್ತದೆ ಎನ್ನುವುದೂ ಇಲ್ಲಿ ಮುಖ್ಯವಾಗುತ್ತದೆ.

ಕಾಫಿ (ಅಥವಾ ಯಾವುದೇ ಬಿಸಿಪೇಯ)ಯನ್ನು ಅದು ಎಷ್ಟೇ ಬಿಸಿಯಾಗಿದ್ದರೂ ಸುರಕ್ಷಿತವಾಗಿ ಕುಡಿಯಬಹುದು. ಆದರೆ ಅದೇ ಕಾಫಿ ದೇಹದ ಚರ್ಮದ ಮೇಲೆ ಬಿದ್ದರೆ ಉರಿಯ ಜೊತೆಗೆ ಗುಳ್ಳೆಗಳು ಏಳಲೂ ಕಾರಣವಾಗಬಹುದು. ಆಫೀಸಿನಲ್ಲೋ ಮನೆಯಲ್ಲೋ ಬಿಸಿ ಕಾಫಿ ಮೈಮೇಲೆ ಬಿದ್ದಾಗ ಅದರ ಹೆಚ್ಚಿನ ಪ್ರಮಾಣವನ್ನು ನಾವು ಧರಿಸಿದ್ದ ಬಟ್ಟೆ ಹೀರಿಕೊಂಡಿರುತ್ತದೆ. ಹೀಗಾಗಿ ಬಿಸಿಪೇಯ ಮತ್ತು ಚರ್ಮದ ನಡುವೆ ಸಂಪರ್ಕ ಹೆಚ್ಚಿನ ಹೊತ್ತು ಇರುತ್ತದೆ ಮತ್ತು ಸಾಕಷ್ಟು ಉಷ್ಣ ಶಕ್ತಿ ಚರ್ಮಕ್ಕೆ ವರ್ಗಾವಣೆಗೊಳ್ಳುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ ನಾವು ಕಾಫಿ ಸೇವಿಸುವಾಗ ಅದು ಗುಟುಕು ಗುಟುಕಾಗಿ ನಮ್ಮ ಬಾಯಿಯೊಳಗೆ ಸೇರುತ್ತದೆ ಮತ್ತು ಬಾಯಿಯಲ್ಲಿ ಕೆಲವೇ ಹೊತ್ತಿನವರೆಗೆ ಇರುತ್ತದೆ.

 ಗುಟುಕು ಗುಟುಕಾಗಿ ಕಾಫಿ ಸೇವಿಸುವುದು ಎರಡು ರೀತಿಗಳಲ್ಲಿ ನೆರವಾಗುತ್ತದೆ. ಅದು ಗಾಳಿಯನ್ನು ಪೇಯದಲ್ಲಿ ಬೆರೆಸುವ ಮೂಲಕ ತಂಪಾಗಿಸುತ್ತದೆ. ಅದು ಪೇಯವನ್ನು ಹನಿಗಳನ್ನಾಗಿ ವಿಭಜಿಸುತ್ತದೆ ಮತ್ತು ಈ ಹನಿಗಳು ಬಾಯಿಯ ಅಂಗಳವನ್ನು ಸ್ಪರ್ಶಿಸಿದಲ್ಲಿ ಸಣ್ಣ ಪ್ರಮಾಣದಲ್ಲಿ ಉಷ್ಣ ಶಕ್ತಿಯನ್ನು ವರ್ಗಾಯಿಸುತ್ತವೆ.

ಮಾಹಿತಿ : MARS Learning Centre, Mangalore. Ph: 9845563943

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News