ಹೆಸರು ಬದಲಿಸಿದ ಹಫೀಝ್ ಸಂಘಟನೆ ಜಮಾಅತ್ ಉದ್ ದಾವಾ
ಇಸ್ಲಾಮಾಬಾದ್, ಫೆ. 4: ಮುಂಬೈ ದಾಳಿಯ ಶಂಕಿತ ಸೂತ್ರಧಾರಿ ಹಫೀಝ್ ಸಯೀದ್ ನೇತೃತ್ವದ ಜಮಾಅತ್ ಉದ್ ದಾವಾ ಸಂಘಟನೆಯು ತನ್ನ ಹೆಸರನ್ನು ಬದಲಿಸಿದೆ.
ಸಯೀದ್‌ನನ್ನು ಗೃಹಬಂಧನದಲ್ಲಿಟ್ಟ ಕೆಲವು ದಿನಗಳ ಬಳಿಕ ಹಾಗೂ ಆತನ ಸಂಘಟನೆಯ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ ಆರಂಭಗೊಂಡ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ತಾನು ತೆಹ್ರೀಕ್ ಆಝಾದಿ ಜಮ್ಮು ಮತ್ತು ಕಾಶ್ಮೀರ (ಟಿಎಜೆಕೆ)ವನ್ನು ಹುಟ್ಟುಹಾಕಬಹುದು ಎಂಬ ಸೂಚನೆಯನ್ನು ಬಂಧನಕ್ಕೆ ಒಂದು ವಾರದ ಮೊದಲು ಸಯೀದ್ ನೀಡಿದ್ದನು.
ಆತನ ಎರಡು ಸಂಘಟನೆಗಳಾದ ಜಮಾಅತ್ ಉದ್ ದಾವಾ ಮತ್ತು ಫಲಾಹ್-ಎ- ಇನ್ಸಾನಿಯತ್ ಫೌಂಡೇಶನ್ (ಎಫ್‌ಐಎಫ್)ಗಳು ಹೊಸ ಟಿಎಜೆಕೆ ಎಂಬ ಹೆಸರಿನಲ್ಲಿ ಈಗಾಗಲೇ ಚಟುವಟಿಕೆಗಳನ್ನು ಆರಂಭಿಸಿವೆ ಎನ್ನುವುದನ್ನು ಅಧಿಕರತ ಮೂಲಗಳು ಖಚಿತಪಡಿಸಿವೆ. ಟಿಎಜೆಕೆಯ ಬಾವುಟಗಳನ್ನು ಲಾಹೋರ್ ಮತ್ತು ಪಾಕಿಸ್ತಾನದ ಇತರ ನಗರಗಳು ಮತ್ತು ಪಟ್ಟಣಗಳಲ್ಲಿ ಪ್ರದರ್ಶಿಸಲಾಗುತ್ತಿದೆ ಎನ್ನಲಾಗಿದೆ.
ಅದು ನಾಳೆ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಲಾಹೋರ್‌ನಲ್ಲಿ ನಾಳೆ ಬೃಹತ್ ಸಮಾವೇಶವೊಂದನ್ನು ಏರ್ಪಡಿಸಲು ಉದ್ದೇಶಿಸಿದೆ.