ಸ್ಟ್ಯಾಚ್ಯು ಆಫ್ ಲಿಬರ್ಟಿಯ ತಲೆ ತುಂಡರಿಸಿದ ಟ್ರಂಪ್: ಜರ್ಮನ್ ಮಾಸಿಕದ ಕಾರ್ಟೂನ್ ನಿಂದ ವಿವಾದ
Update: 2017-02-05 12:47 IST
ಬರ್ಲಿನ್,ಫೆ.5: ಸ್ಟ್ಯಾಚ್ಯು ಆಫ್ ಲಿಬರ್ಟಿಯ ತಲೆ ತುಂಡರಿಸಿ ನಿಂತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಕಾರ್ಟೂನ್ ಪ್ರಕಟಿಸಿದ ಜರ್ಮನಿಯ ಮಾಸ ಪತ್ರಿಕೆ ವಿವಾದದ ಕಿಡಿ ಹಚ್ಚಿದೆ. ಒಂದು ಕೈಯಲ್ಲಿ ಸ್ಟ್ಯಾಚ್ಯು ಆಫ್ ಲಿಬರ್ಟಿಯ ತಲೆ ಮತ್ತೊಂದು ಕೈಯಲ್ಲಿ ರಕ್ತಸಿಕ್ತ ಕತ್ತಿ ಹಿಡಿದು ಟ್ರಂಪ್ ನಿಂತ ಚಿತ್ರವನ್ನು ಮಾಸಪತ್ರಿಕೆ ಪ್ರಕಟಿಸಿದೆ. ಅಮೆರಿಕ ಫಸ್ಟ್ ಎನ್ನುವ ಟ್ರಂಪ್ ಘೋಷಣೆಯೂ ಕಾರ್ಟೂನ್‌ನ ಜೊತೆಗಿದೆ. 1980ರಲ್ಲಿ ಕ್ಯೂಬನ್ ನಿರಾಶ್ರಿತನಾಗಿ ಅಮೆರಿಕಕ್ಕೆ ಬಂದ ಎಡಲ್ ರಾಡ್ರಿಗಸ್ ವಿವಾದಾಸ್ಪದ ಕಾರ್ಟೂನ್ ರಚಿಸಿದ್ದಾರೆ.
ಕಾರ್ಟೂನಿಗೆ ಬೆಂಬಲ ಮತ್ತು ವಿರೋಧಗಳು ಅಮೆರಿಕದಲ್ಲಿ ಈಗ ಸಕ್ರಿಯವಾಗಿದ್ದು, ಅಮೆರಿಕದ ಪ್ರಜಾಪ್ರಭುತ್ವದ ಕೊರಳು ಕತ್ತರಿಸಿರುವುದ ನ್ನು ತಾನು ಚಿತ್ರಿಸಿದ್ದೇನೆಎಂದು ಕಾರ್ಟೂನಿಸ್ಟ್ ಹೇಳಿದ್ದಾರೆಂದು ವರದಿತಿಳಿಸಿದೆ.