×
Ad

ಗವರ್ನರ್ -ಎಐಎಡಿಎಂಕೆ ಶಾಸಕರ ಭೇಟಿ ರದ್ದು

Update: 2017-02-05 18:33 IST

ಚೆನ್ನೈ, ಫೆ.5: ತಮಿಳುನಾಡಿನ ಆಡಳಿತಾರೂಢ ಮುಖ್ಯ ಮಂತ್ರಿ ಪನ್ನೀರ್‌ ಸೆಲ್ವಂ ,ಎಐಎಡಿಎಂಕೆ ಪಕ್ಷದ ಶಾಸಕರು ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾಗುವ ಕಾರ್ಯಕ್ರಮ ರದ್ಧಾಗಿದೆ.
ಉಸ್ತುವಾರಿ ರಾಜ್ಯಪಾಲ ವಿದ್ಯಾ ಸಾಗರ್‌ ರಾವ್‌ ಹೊಸದಿಲ್ಲಿಯಿಂದ ವಾಪಸಾಗದಿರುವ ಹಿನ್ನೆಲೆಯಲ್ಲಿ ಅವರನ್ನು ಶಾಸಕರಿಗೆ  ಭೇಟಿಯಾಗಲು ಸಾಧ್ಯವಾಗದು.
ರಾಜ್ಯಪಾಲ ವಿದ್ಯಸಾಗರ‍್ ಹಿಂದೆ ನಿಗದಿಯಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೊಯಮತ್ತೂರಿನಿಂದ ನೇರವಾಗಿ ಹೊಸದಿಲ್ಲಿಗೆ ತೆರಳಿದ್ದಾರೆ. ಸೋಮವಾರ ಅವರು ಹೊಸದಿಲ್ಲಿಯಿಂದ ವಾಪಸಾದ ಬಳಿಕ ರಾಜ್ಯಪಾಲರು ಭೇಟಿಗೆ ಸಿಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಪಕ್ಷದ ಕಚೇರಿಯಲ್ಲಿ ಇಂದು ನಡೆದ ಎಐಎಡಿಎಂಕೆ ಶಾಸಕಾಂಗ ಸಭೆಯಲ್ಲಿ ಶಶಿಕಲಾ ನಟರಾಜನ್‌  ಅವರನ್ನು ನೂತನ ಸಿಎಂ  ಆಗಿ ಆಯ್ಕೆ ಮಾಡಲಾಗಿತ್ತು.
ಮಾಜಿ ಮುಖ್ಯ ಮಂತ್ರಿ ದಿವಂಗತ ಜಯಲಲಿತಾ ಅವರ ಸ್ನೇಹಿತೆಯಾಗಿರುವ ಶಶಿಕಲಾ ಇತ್ತೀಚೆಗೆ ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು
ಮುಖ್ಯ ಮಂತ್ರಿ ಪನ್ನೀರ್‌ ಸೆಲ್ವಂ ಅವರು ಸಭೆಯಲ್ಲಿ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿ, ಶಶಿಕಲಾ ನಟರಾಜನ್‌ ಅವರನ್ನು ಮುಖ್ಯ ಮಂತ್ರಿಯಾಗಿ ಆಯ್ಕೆ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟರು.  ಸಭೆ ಅವರನ್ನು ಮುಖ್ಯಮಂತ್ರಿಯಾಗಿ ಅಂಗೀಕರಿಸಿತು.
ಜಯಲಲಿತಾ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ಮಂತ್ರಿ ಹುದ್ದೆಯನ್ನು ಒಟ್ಟಿಗೆ ನಿಭಾಯಿಸಿದ್ದರು. ಶಶಿಕಲಾ ನಟರಾಜನ್‌ ಅದೇ ದಾರಿಯಲ್ಲಿ ಮುನ್ನಡೆಯುವುದಾಗಿ  ಭರವಸೆ ನೀಡಿದ್ದಾರೆಂದು  ಪಕ್ಷದ ಮೂಲಗಳು ತಿಳಿಸಿವೆ.
ಮುಖ್ಯ ಮಂತ್ರಿಯಾಗಿ ನಿಯೋಜನೆಗೊಂಡ ಬಳಿಕ ಅವರು ತನ್ನ ಬೆಂಬಲಿಗರೊಂದಿಗೆ ಬಾಲ್ಕನಿಯಲ್ಲಿ ಕಾಣಿಸಿಕೊಂಡರು. 
ಒ.ಪನ್ನೀರ‍್ ಸೆಲ್ವಂ ಅವರು ಜಯಲಲಿತಾ ಅನುಪಸ್ಥಿತಿಯಲ್ಲಿ ಎರಡು ಬಾರಿ ಮುಖ್ಯ ಮಂತ್ರಿಯಾಗಿದ್ದರು. ಹಿಂದೆ ಜಯಲಲಿತಾ ಭ್ರಷ್ಟಾಚಾರ ಹಗರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದ ಸಮಯದಲ್ಲಿ ಸೆಲ್ವಂ ಮುಖ್ಯಮಂತ್ರಿಯಾಗಿದ್ದರು. ಜಯಲಲಿತಾ ಅವರು ಬಿಡುಗಡೆಗೊಂಡ ಬೆನ್ನಲ್ಲೆ ಅವರಿಗೆ ಮುಖ್ಯ ಮಂತ್ರಿ ಪಟ್ಟ ಬಿಟ್ಟುಕೊಟ್ಟಿದ್ದರು. 
ಕಳೆದ ಡಿಸೆಂಬರ್‌ನಲ್ಲಿ ಜಯಲಲಿತಾ ನಿಧನರಾದ ಬೆನ್ನಲ್ಲೆ ಮತ್ತೆ ಸೆಲ್ವಂ ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಜಯಲಲಿತಾ ಅವರ ಸ್ನೇಹಿತೆ ಶಶಿಕಲಾ ಅವರಿಗೆ ಮುಖ್ಯ ಮಂತ್ರಿ ಹುದ್ದೆಯನ್ನು ಬಿಟ್ಟುಕೊಟ್ಟಿದ್ದಾರೆ.
61ರ ಹರೆಯದ ಶಶಿಕಲಾ ಅವರು ಚುನಾಯಿತ ಶಾಸಕರಲ್ಲ.ಜಯಲಲಿತಾ ಇರುವಾಗ ಪಕ್ಷದಲ್ಲಿ ಹಿಂದೆ ಯಾವುದೇ ಹುದ್ದೆಯನ್ನು ವಹಿಸಿಕೊಂಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News