×
Ad

ಲಿಬಿಯ ಕರಾವಳಿಯಲ್ಲಿ 120 ವಲಸಿಗರ ರಕ್ಷಣೆ

Update: 2017-02-05 19:17 IST

ಟ್ರಿಪೋಲಿ, ಫೆ. 5: ಲಿಬಿಯದ ತಟ ರಕ್ಷಣಾ ಪಡೆ ರವಿವಾರ ರಾಜಧಾನಿ ಟ್ರಿಪೋಲಿಯ ಕರಾವಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 120ಕ್ಕೂ ಅಧಿಕ ವಲಸಿಗರನ್ನು ರಕ್ಷಿಸಿದೆ.

ವಲಸಿಗರು ಟ್ರಿಪೋಲಿಯಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಪಟ್ಟಣ ಸಬ್ರತದಿಂದ ಶುಕ್ರವಾರ ಪ್ರಯಾಣ ಆರಂಭಿಸಿದ್ದರು. ಆದರೆ, ಅವರ ದೋಣಿಯ ಯಂತ್ರ ಕೆಟ್ಟಿತು ಎಂದು ತಟರಕ್ಷಣಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದರು.

ಟ್ರಿಪೋಲಿಯಿಂದ ಈಶಾನ್ಯಕ್ಕೆ 20 ನಾಟಿಕಲ್ ಮೈಲು ದೂರದಲ್ಲಿ ತಟರಕ್ಷಣಾ ಪಡೆಯ ಗಸ್ತು ನೌಕೆಯೊಂದು ವಲಸಿಗರ ದೋಣಿಯನ್ನು ತಡೆಯಿತು.
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ದೇಶಗಳ ನಾಗರಿಕರು ದೋಣಿಯಲ್ಲಿದ್ದರು.

ಇತ್ತೀಚಿನ ದಿನಗಳಲ್ಲಿ ಯುರೋಪ್‌ನತ್ತ ತೆರಳುತ್ತಿದ್ದ 400ಕ್ಕೂ ಅಧಿಕ ಮಂದಿಯನ್ನು ತಡೆಹಿಡಿದಿರುವುದಾಗಿ ಲಿಬಿಯ ಶನಿವಾರ ತಿಳಿಸಿದೆ.

ಮಾಲ್ಟದಲ್ಲಿ ಐರೋಪ್ಯ ಒಕ್ಕೂಟದ ನಾಯಕರ ಸಭೆ ನಡೆದ ಬಳಿಕ ಲಿಬಿಯ ಈ ಕ್ರಮ ತೆಗೆದುಕೊಂಡಿದೆ. ಲಿಬಿಯದಿಂದ ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ವಲಸಿಗರ ಮೇಲೆ ಕಡಿವಾಣ ಹಾಕುವ ಕ್ರಮಗಳಿಗೆ ಆ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News