ಸಿರಿಯಲ್ಲಿ ‘ಸುರಕ್ಷಿತ ವಲಯ’ಕ್ಕೆ ವಿಶ್ವಸಂಸ್ಥೆ ವಿರೋಧ
ಬೆರೂತ್, ಫೆ. 5: ಸಿರಿಯದಲ್ಲಿ ನಿರಾಶ್ರಿತರಿಗಾಗಿ ‘ಸುರಕ್ಷಿತ ವಲಯ’ಗಳನ್ನು ಸ್ಥಾಪಿಸುವ ಪ್ರಸ್ತಾಪವನ್ನು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನರ್ ವಿರೋಧಿಸಿದ್ದಾರೆ. ‘ಸುರಕ್ಷಿತ ವಲಯ’ಗಳನ್ನು ಸ್ಥಾಪಿಸಲು ಆ ದೇಶ ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.
‘‘ಸುರಕ್ಷಿತ ವಲಯಗಳನ್ನು ಸ್ಥಾಪಿಸುವ ಬಗ್ಗೆ ಚರ್ಚಿಸುತ್ತಾ ಕಾಲ ಕಳೆಯುವುದು ಬೇಡ. ಅವುಗಳು ಸ್ಥಾಪನೆಯಾಗುವುದಿಲ್ಲ. ಯಾಕೆಂದರೆ, ಅವುಗಳು ಸುರಕ್ಷಿತವಾಗಿರುವುದಿಲ್ಲ’’ ಎಂದು ಫಿಲಿಪ್ಪೋ ಗ್ರಂಡಿ ಹೇಳಿದ್ದಾರೆ.
‘‘ಶಾಂತಿ ಸ್ಥಾಪನೆಯ ಬಗ್ಗೆ ನಾವು ಗಮನ ಹರಿಸೋಣ. ಆಗ ಎಲ್ಲ ಸ್ಥಳಗಳು ಸುರಕ್ಷಿತವಾಗಿರುತ್ತವೆ. ಆ ಪ್ರಯತ್ನಗಳನ್ನು ನಾವು ಮಾಡಬೇಕು’’ ಎಂದರು.
ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ನಿವಾಸಿಗಳಿಗೆ ಅಮೆರಿಕ ಪ್ರವೇಶವನ್ನು ನಿರಾಕರಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆದೇಶವನ್ನು ವಿರೋಧಿಸಿ ಜನರು ಶನಿವಾರ ಲಾಸ್ ಏಂಜಲಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮುಸ್ಲಿಮ್ ನಿಷೇಧ ಆದೇಶವನ್ನು ವಿರೋಧಿಸಿ ಪ್ಯಾರಿಸ್‌ನ ಐಫೆಲ್ ಟವರ್ ಸಮೀಪದ ಟ್ರೊಕಡೆರೊ ಪ್ಲಾಝಾದಲ್ಲಿ ಜನರು ಶನಿವಾರ ಪ್ರತಿಭಟನೆ ನಡೆಸಿದರು. ‘ಮೆಕ್ ಅಮೆರಿಕ ಹೇಟ್ ಅಗೆನ್’ (ಅಮೆರಿಕ ಮತ್ತೆ ದ್ವೇಷಿಸುವಂತೆ ಮಾಡಿ)ಎಂಬ ಘೋಷಪತ್ರ ಎಲ್ಲರ ಗಮನ ಸೆಳೆಯಿತು.