×
Ad

ನಕ್ಸಲ್‌ರಿಂದ ಸ್ಫೋಟ: ಭದ್ರತಾ ಸಿಬ್ಬಂದಿಗೆ ಗಾಯ

Update: 2017-02-05 23:39 IST

ರಾಯಪುರ,ಫೆ.5: ಛತ್ತೀಸ್‌ಗಡದ ದಾಂತೆವಾಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ರವಿವಾರ ನಕ್ಸಲರು ಇರಿಸಿದ್ದ ಪ್ರೆಷರ್ ಬಾಂಬ್ ಸ್ಫೋಟದಿಂದಾಗಿ ಜಿಲ್ಲಾ ಮೀಸಲು ಪಡೆಯ ಕಾನ್‌ಸ್ಟೇಬಲ್‌ವೋರ್ವ ಗಾಯಗೊಂಡಿದ್ದಾನೆ.
ಬೆಳಗಿನ ಜಾವ ನಯನಾರ್ ಮತ್ತು ಗಾತಂ ಗ್ರಾಮಗಳ ಮಧ್ಯೆ ಭದ್ರತಾ ಸಿಬ್ಬಂದಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಕಾನ್‌ಸ್ಟೇಬಲ್ ಪ್ರತಾಪ್‌ಸಿಂಗ್ ಮರ್ಕಮ್ ಆಕಸ್ಮಿಕವಾಗಿ ನಕ್ಸಲರು ಇರಿಸಿದ್ದ ಪ್ರೆಷರ್ ಬಾಂಬ್ ಮೇಲೆ ಕಾಲಿರಿಸಿದ್ದ. ತಕ್ಷಣ ಅದು ಸ್ಫೋಟಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಾಟೆಕಲ್ಯಾಣ ಪೊಲೀಸ್ ಠಾಣಾಧಿಕಾರಿ ವಿಜಯ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News