×
Ad

ಆಸ್ಟ್ರೇಲಿಯ ಪ್ರವಾಸಕ್ಕೆ ಮ್ಯಾಥ್ಯೂಸ್ ಅಲಭ್ಯ

Update: 2017-02-05 23:45 IST

ಕೊಲಂಬೊ, ಫೆ.5: ಗಾಯದ ಸಮಸ್ಯೆ ಎದುರಿಸುತ್ತಿರುವ ಆಲ್‌ರೌಂಡರ್ ಆ್ಯಂಜೆಲೊ ಮ್ಯಾಥ್ಯೂಸ್ ಮುಂಬರುವ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟ್ವೆಂಟಿ-20 ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ದೃಢಪಡಿಸಿದೆ.

ಆಯ್ಕೆಗಾರರು ಮಂಗಳವಾರ ಟ್ವೆಂಟಿ-20 ತಂಡವನ್ನು ಆಯ್ಕೆ ಮಾಡಲಿದ್ದು, ಆಗ ಹಂಗಾಮಿ ನಾಯಕನನ್ನು ಆಯ್ಕೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮ್ಯಾಥ್ಯೂಸ್ ದಕ್ಷಿಣ ಆಫ್ರಿಕ ವಿರುದ್ಧ ನಡೆದಿದ್ದ 2ನೆ ಟ್ವೆಂಟಿ-20 ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ದಿನೇಶ್ ಚಾಂಡಿಮಲ್ ಆಫ್ರಿಕ ವಿರುದ್ಧದ ಟ್ವೆಂಟಿ-20 ಸರಣಿಯ ಫೈನಲ್ ಪಂದ್ಯದಲ್ಲಿ ತಂಡದ ನಾಯಕತ್ವವಹಿಸಿದ್ದರು. ಏಕದಿನ ತಂಡದಲ್ಲಿ ಉಪುಲ್ ತರಂಗ ಹಂಗಾಮಿ ನಾಯಕನಾಗಿ ಕಾರ್ಯನಿರ್ವಹಿಸಿದ್ದರು.

ಚಾಂಡಿಮಲ್ ಹಾಗೂ ತರಂಗ ಸದ್ಯ ಕಳಪೆ ಫಾರ್ಮ್‌ನಲ್ಲಿರುವ ಕಾರಣ ಟ್ವೆಂಟಿ-20 ತಂಡದ ಅಂತಿಮ 11ರ ಬಳಗದಲ್ಲಿ ಅವರಿಬ್ಬರ ಅವಶ್ಯಕತೆಯಿಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಮ್ಯಾಥ್ಯೂಸ್ ಜಾಗದಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ಆಯ್ಕೆಗಾರರಲ್ಲಿ ಗೊಂದಲ ಕಾಡಲಾರಂಭಿಸಿದೆ.

ಚಾಂಡಿಮಲ್ ದ.ಆಫ್ರಿಕ ವಿರುದ್ಧ 3 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಅಜೇಯ 6, 22 ಹಾಗೂ 5 ರನ್ ಗಳಿಸಿದ್ದರು. ಮತ್ತೊಂದೆಡೆ, ತರಂಗ ಆಡಿರುವ ಏಕೈಕ ಪಂದ್ಯದಲ್ಲಿ 11 ಎಸೆತಗಳಲ್ಲಿ 20 ರನ್ ಗಳಿಸಿದ್ದರು.

ಶ್ರೀಲಂಕಾ ತಂಡ ಆಸ್ಟ್ರೇಲಿಯದ ಕ್ಯಾನ್‌ಬೆರ್ರಾದಲ್ಲಿ ಫೆ.15 ರಂದು ಅಭ್ಯಾಸ ಪಂಂದ್ಯ ಆಡಲಿದ್ದು, 17 ರಿಂದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News