ಹಿದಾಯ ಕಾಲನಿಗೆ ಕೂರ್ನಡ್ಕ ಖತೀಬ್, ಪುತ್ತೂರು ಇ ಫ್ರೆಂಡ್ಸ್ ತಂಡ ಭೇಟಿ

Update: 2017-02-06 08:08 GMT

ಬಂಟ್ವಾಳ, ಫೆ.6: ಕಾಲನಿ ನಿರ್ಮಾಣ ಮತ್ತು ಬಡವರ ಕಲ್ಯಾಣ ಅತ್ಯುತ್ತಮ ಸತ್ಕರ್ಮವಾಗಿದೆ. ಹಿದಾಯ ಫೌಂಡೇಶನ್ ಸುಮಾರು ನಲ್ವತ್ತು ಕುಟುಂಬಗಳನ್ನು ಒಂದೇ ಕಡೆ ಸೇರಿಸಿ ಅವರ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಕೂರ್ನಡ್ಕ ಖತೀಬ್ ಅಬೂಬಕರ್ ಸಿದ್ದೀಕ್ ಜಲಾಲಿ ಹೇಳಿದರು.

ಅವರು ಕಾವಲ್ಕಟ್ಟೆಯ ಸುಮಾರು ಐದು ಎಕರೆ ಜಮೀನಿನಲ್ಲಿ ವ್ಯಾಪಿಸಿರುವ ಹಿದಾಯ ಫೌಂಡೇಶನ್ ಅಧೀನ ಸಮುದಾಯ ಕಾಲನಿಯನ್ನು ವೀಕ್ಷಿಸಿದ ಬಳಿಕ ಮಾತನಾಡಿದರು.

ಈ ವೇಳೆ ಅವರು ಹಿದಾಯ ಫೌಂಡೇಶನ್ ವಿಶೇಷ ಮಕ್ಕಳ ಸಂರಕ್ಷಣೆ ಮತ್ತು ಚಿಕಿತ್ಸಾ ಕೇಂದ್ರ, ಹಿದಾಯ ಕಮ್ಯುನಿಟಿ ಸೆಂಟರ್‌ನಲ್ಲಿರುವ ಟೈಲರಿಂಗ್ ಕೇಂದ್ರ, ಅರಬಿ ಮದ್ರಸಕ್ಕೆ ಭೇಟಿ ನೀಡಿದರು. ಅವರೊಂದಿಗೆ ಪುತ್ತೂರಿನ ಇ- ಫ್ರೆಂಡ್ಸ್ ಕಾರ್ಯಕರ್ತರು ಆಗಮಿಸಿದ್ದರು.

ಹಿದಾಯ ಫೌಂಡೇಶನ್‌ನ ಸ್ಥಾಪಕ ಖಾಸಿಮ್ ಅಹ್ಮದ್ ಯೋಜನೆ ಮತ್ತು ಯೋಚನೆಗಳ ಕುರಿತು ಮಾಹಿತಿ ನೀಡಿದರು. ಇ ಫ್ರೆಂಡ್ಸ್ ಕಾರ್ಯಕರ್ತರು ಯೋಜನೆಯ ಸಮಗ್ರ ಅಧ್ಯಯನ ನಡೆಸಿ ತಮ್ಮ ಕಾರ್ಯ ಚಟುವಟಿಕೆಗೆ ಸ್ಫೂರ್ತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News