ಜಗತ್ತಿನ ಅತ್ಯಂತ ಹಳೆಯ ‘ಇಮೋಜಿ’ ಪತ್ತೆ
Update: 2017-02-06 14:35 IST
ಲಂಡನ್,ಫೆ.6: ಜಗತ್ತಿನ ಅತ್ಯಂತ ಹಳೆಯ ಇಮೋಜಿ(ಸಣ್ಣ ನಗುಮುಖ ಚಿತ್ರ) ಯುರೋಪಿನಲ್ಲಿ ಪತ್ತೆಯಾಗಿದೆಯೆಂದು ವಿಜ್ಞಾನಿಗಳು ತಿಳಿಸಿದ್ದಾರೆ. 1635ರಲ್ಲಿ ಒಂದು ಕಾನೂನು ದಾಖಲೆಯಲ್ಲಿ ಸ್ಮೈಲಿಯನ್ನು ಬರೆಯಲಾಗಿದ್ದು, ಸ್ಲೋವಾಕಿಯ ಸಮೀಪದ ಒಂದು ಗ್ರಾಮದಲ್ಲಿ ವಾಸವಿದ್ದ ವಕೀಲ ಮುನ್ಸಿಪಲ್ ದಾಖಲೆಗಳನ್ನು ಪರಿಶೀಲಿಸುವ ವೇಳೆ ತನ್ನ ಸಹಿಯ ಜೊತೆಗೆ ಇಮೋಜಿಯನ್ನು ಬರೆದಿದ್ದರು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಒಂದು ಸೊನ್ನೆಯ ಒಳಗೆ ಮೂರು ಬೊಟ್ಟುಗಳ ಚಿತ್ರವಿದು. ಇದನ್ನು ಸಂಶೋಧಕರು ಜಗತ್ತಿನ ಅತ್ಯಂತ ಹಳೆಯ ಇಮೋಜಿ ಎಂದು ಹೇಳಿದ್ದಾರೆ. ಈ ಹಿಂದೆ 1648ರಲ್ಲಿ ಇಂಗ್ಲೆಂಡ್‌ನ ರಾಬರ್ಟ್ ಹೆರಿಕ್‌ರ ಟು ಫಾರ್ಚ್ಯೂನ್ ಎನ್ನುವ ಕವಿತೆಯಲ್ಲಿ ರಚಿಸಿದ್ದ ಸ್ಮೈಲಿ ಅನ್ನು ಅತ್ಯಂತ ಹಳೆಯ ಇಮೋಜಿಯೆಂದು ಭಾವಿಸಲಾಗಿತ್ತು.