ಚಿನ್ನಮ್ಮನಿಗೆ ಪ್ರಮಾಣವಚನಕ್ಕೆ ಇನ್ನೂ ಗ್ರೀನ್ ಸಿಗ್ನಲ್ ನೀಡದ ಗವರ್ನರ್ !
Update: 2017-02-06 21:29 IST
ಚೆನ್ನೈ,ಫೆ.6: ತಮಿಳುನಾಡಿನ ನಿಯೋಜಿತ ಮುಖ್ಯ ಮಂತ್ರಿ ಶಶಿಕಲಾ ನಟರಾಜನ್ ಅವರಿಗೆ ಪ್ರಮಾಣ ವಚನಕ್ಕೆ ಸಿದ್ದತೆ ನಡೆದಿದ್ದರೂ, ಉಸ್ತುವಾರಿ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಇನ್ನೂ ಪ್ರಮಾಣವಚನಕ್ಕೆ ಗ್ರೀನ್ ಸಿಗ್ನಲ್ ನೀಡಿಲ್ಲ. ಈ ಕಾರಣದಿಂದಾಗಿ ಅನಿಶ್ಚಿತತೆ ಮುಂದುವರಿದಿದೆ.
ರಾಜ್ಯಪಾಲ ವಿದ್ಯಾಸಾಗರ‍್ ಅವರು ಶಶಿಕಲಾ ನಟರಾಜನ್‌ಗೆ ಸಿಎಂ ಆಗಿ ಪ್ರಮಾಣ ವಚನಕ್ಕೆ ಅವಕಾಶ ನೀಡುವ ವಿಚಾರದಲ್ಲಿ ದಿಲ್ಲಿಯಲ್ಲಿ ಕಾನೂನು ತಜ್ಞರ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಶಶಿಕಲಾ ನಟರಾಜನ್ ವಿರುದ್ಧ ಅಕ್ರಮ ಆಸ್ತಿ ಕಬಳಿಕೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅವರಿಗೆ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನಕ್ಕೆ ಅವಕಾಶ ನೀಡಬಾರದೆಂದು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ.