ಫೆ.9ರಿಂದ ‘ಸ್ಪಂದನಾ-2017’ ಕಾರ್ಯಾಗಾರ

Update: 2017-02-06 18:30 GMT

ಮಂಗಳೂರು, ಫೆ.6: ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯದ ವತಿಯಿಂದ ಸ್ಪಂದನ-2017ರ ರಾಷ್ಟ್ರೀಯ ಮಟ್ಟದ ‘ಸಮಾಜ ಬದಲಾವಣೆಯಲ್ಲಿ ಯುವಕರ ಪಾತ್ರ’ ವಿಷಯದ ಕುರಿತು ಕಾರ್ಯಾಗಾರವನ್ನು ಫೆ.9ಮತ್ತು 10ರಂದು ನಗರದ ರೋಶನಿ ನಿಲಯ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಉಪಪ್ರಾಂಶುಪಾಲೆ ಜೆನ್ನೀಸ್ ಮೇರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಅಶೋಕ್ ಇನೋವೇಟರ್ಸ್‌ ಸಹಭಾಗಿತ್ವದಲ್ಲಿ ನಡೆಯುವ ಕಾರ್ಯಾಗಾರವನ್ನು ಫೆ.9ರಂದು ಬೆಳಗ್ಗೆ 10:30ಕ್ಕೆ ದ.ಕ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಎಸ್. ಬೀಳಗಿ ಉದ್ಘಾಟಿಸುವರು. ಫೆ.10ರಂದು ಮದ್ರಾಸ್ ಐಐಟಿಯ ಪ್ರೊ. ರಾಜನಾಯಕಂ ಅತಿಥಿಯಾಗಿ ಭಾಗವಹಿಸುವರು. ಫೆ.11ರಂದು ಬೆಳಗ್ಗೆ 9:30ರಿಂದ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ‘ಟೀನ್ ಫ್ರೇಮ್ ಚೇಂಜ್ ಡೇ’ ಎಂಬ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಲಿದೆ ಎಂದು ಮಾಹಿತಿ ನೀಡಿದರು.

 ಸುದ್ದಿಗೋಷ್ಠಿಯಲ್ಲಿ ಸ್ಪಂದನ-2017ರ ಸಂಯೋಜಕ ಫಾ. ಪ್ರಿನ್ಸ್, ಮಿಥುನ್ ಸಿಕ್ವೇರಾ, ಶವಾದ್ ಗೂನಡ್ಕ, ಜೆಸ್ಸಿ ರಾಯನ್ ಮೋನಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News